ಭಯಾನಕ: ಫ್ಲ್ಯಾಟ್ ನಲ್ಲಿ ಗಗನಸಖಿಯ ಕತ್ತು ಸೀಳಿ‌ ಕೊಲೆ - Mahanayaka

ಭಯಾನಕ: ಫ್ಲ್ಯಾಟ್ ನಲ್ಲಿ ಗಗನಸಖಿಯ ಕತ್ತು ಸೀಳಿ‌ ಕೊಲೆ

04/09/2023


Provided by

ಮುಂಬೈನ ಉಪನಗರದ ಫ್ಲ್ಯಾಟ್​ವೊಂದರಲ್ಲಿ ತರಬೇತಿ ನಿರತ ಗಗನಸಖಿಯ ಶವ ಕತ್ತು ಸೀಳಿದ ರೀತಿಯಲ್ಲಿ ಪತ್ತೆಯಾಗಿದೆ. ರೂಪಲ್ ಓಗ್ರೆ, ಕೊಲೆಯಾದವರು.

ಛತ್ತೀಸ್ ಗಢದಿಂದ ಬಂದಿದ್ದ ರೂಪಲ್ ಓಗ್ರೆ ಅವರು ಏರ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದರು. ಕೆಲವು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ ತನ್ನ ಸಹೋದರಿ ಮತ್ತು ತನ್ನ ಗೆಳೆಯನೊಂದಿಗೆ ಅಂಧೇರಿಯ ಪ್ಲಶ್ ಹೌಸಿಂಗ್ ಸೊಸೈಟಿಯಲ್ಲಿ ತನ್ನ ಫ್ಲಾಟ್ ನಲ್ಲಿ ವಾಸಿಸುತ್ತಿದ್ದರು.

ರೂಪಾಲ್ ಗೆ ಆಕೆಯ ಮನೆಯವರು ಫೋನ್‌ ಕರೆ ಮಾಡಿದ್ದರು. ಆದರೆ ಆಕೆ ಕಾಲ್‌ ಪಿಕ್ ಮಾಡಲಿಲ್ಲ. ಅನುಮಾನಗೊಂಡು ಮುಂಬೈನಲ್ಲಿದ್ದ ಆಕೆಯ ಸ್ನೇಹಿತರಿಗೆ ಪರೀಕ್ಷಿಸುವಂತೆ ತಿಳಿಸಿದ್ದಾರೆ.

ಆಕೆಯ ಸ್ನೇಹಿತರು ಅಲ್ಲಿಗೆ ಹೋಗಿ ನೋಡಿದಾಗ ಫ್ಲಾಟ್ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ನಂತರ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಫ್ಲಾಟ್‌ಗೆ ಬಂದು ನೋಡಿದ್ದಾರೆ. ಗಗನಸಖಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆ ಮೃತಪಟ್ಟಿದ್ದಾಳೆ ಎಂದು ನಂತರ ವೈದ್ಯರು ಸ್ಪಷ್ಟಪಡಿಸಿದರು.

ಓಗ್ರೆ ಅವರ ಕೊಲೆಗೆ ಸಂಬಂಧಿಸಿದಂತೆ ಸ್ವೀಪರ್ ಆಗಿ ಕೆಲಸ ಮಾಡುವ 40 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಆತನನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿಕ್ರಮ್ ಅತ್ವಾಲ್ ನನ್ನು ಬಂಧಿಸಲಾಗಿದ್ದು, ಹೌಸಿಂಗ್ ಸೊಸೈಟಿಯಲ್ಲಿನ ಭದ್ರತಾ ಕ್ಯಾಮೆರಾಗಳ ಪರಿಶೀಲನೆ ನಡೆಯುತ್ತಿದೆ. ಆರೋಪಿಗಳ ಪತ್ತೆಗೆ 12 ತಂಡಗಳನ್ನು ರಚಿಸಲಾಗಿದೆ.

ಇತ್ತೀಚಿನ ಸುದ್ದಿ