ಕಿತ್ತು ತಿನ್ನುವ ಬಡತನದ ಸ್ಥಿತಿಯಿಂದ ಈ ಸ್ಥಿತಿಗೆ ಬಂದಿದ್ದೇವೆ: ಸ್ವಾತಂತ್ರ್ಯೋತ್ಸವದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತುಗಳು - Mahanayaka
3:33 AM Thursday 11 - September 2025

ಕಿತ್ತು ತಿನ್ನುವ ಬಡತನದ ಸ್ಥಿತಿಯಿಂದ ಈ ಸ್ಥಿತಿಗೆ ಬಂದಿದ್ದೇವೆ: ಸ್ವಾತಂತ್ರ್ಯೋತ್ಸವದಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾತುಗಳು

veerendra hegade
15/08/2022

ಬೆಳ್ತಂಗಡಿ: ವಿಶ್ವಮಾನವತೆಯ ತತ್ವಕ್ಕನುಗುಣವಾಗಿ ಮುಂದಿನ 25 ವರ್ಷಗಳ ಅವಧಿಯಲ್ಲಿ ಭಾರತದ ರಚನಾತ್ಮಕ ಬೆಳವಣಿಗೆಗಾಗಿ ಯೋಜಿಸಿ ಶ್ರಮಿಸುವುದರ ಕಡೆಗೆ ಯುವಸಮೂಹ ಆಲೋಚಿಸಬೇಕು ಎಂದು ರಾಜ್ಯಸಭೆ ಸದಸ್ಯ, ಆಜಾದಿ ಕಾ ಅಮೃತ ಮಹೋತ್ಸವ ರಾಷ್ಟ್ರೀಯ ಸಮಿತಿ ಸದಸ್ಯರಾದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟರು.


Provided by

ಉಜಿರೆಯ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದ 75 ವರ್ಷಗಳ ಅವಧಿ ಮಹತ್ವಪೂರ್ಣ. ಈ ಅವಧಿಯಲ್ಲಿ ದೇಶ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಕಿತ್ತು ತಿನ್ನುವ ಬಡತನದ ಸ್ಥಿತಿಯಿಂದ ಈ ಸ್ಥಿತಿಗೆ ಬಂದಿದ್ದೇವೆ ಇದೊಂದು ದೊಡ್ಡ ಸಾಧನೆಯಾಗಿದೆ ಎಂದರು

ಮಹಾತ್ಮಾ ಗಾಂಧೀಜಿ ಈ ದೇಶದ ಜನರನ್ನು ಒಗ್ಗೂಡಿಸಿ ಅಹಿಂಸಾತ್ಮಕವಾದ ಸ್ವಾತಂತ್ರ್ಯ ಹೋರಾಟ ರೂಪಿಸಿ ಯಶಸ್ಸು ಕಂಡರು. ಈ ಮೂಲಕ ಬ್ರಿಟಿಷರಿಂದ ಭಾರತವನ್ನು ವಿಮುಕ್ತಗೊಳಿಸಿದರು. ಇದು ಈಗಲೂ ಅಹಿಂಸಾತ್ಮಕ ಹೋರಾಟದ ಶ್ರೇಷ್ಠ ಮಾದರಿಯಾಗಿದೆ ನಾವು ಇದನ್ನು ಅನುಸರಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಈಗ ಆಮೂಲಾಗ್ರ ಬದಲಾವಣೆಗಳಾಗಿವೆ. ಯುವ ಸಮುದಾಯ ಕನಸು ಕಾಣಲು ಹಾಗೂ ಕನಸನ್ನು ಸಕ್ಷಾತ್ ಕಾರಗೊಳಿಸಲು ಅವಕಾಶಗಳಿವೆ ಅದೇ ನಾವು ಸಾಧಿಸಿರುವ ದೊಡ್ಡ ಪ್ರಗತಿಯಾಗಿದೆ ಎಂದರು  . ಪ್ರಗತಿ ಮತ್ತು ವಿಶ್ವಮಾನವತ್ವ ಇವೆರಡೂ ಒಟ್ಟೊಟ್ಟಿಗೆ ಕ್ರಮಿಸುವ ಹೊಸದೊಂದು ಮಾದರಿಯನ್ನು ದೇಶದ ಯುವ ಸಮೂಹ ಜಗತ್ತಿಗೆ ಕೊಡುಗೆಯಾಗಿ ನೀಡಬೇಕು ಎಂದು ಅವರು ಹೇಳಿದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರಕುಮಾರ್, ಡಾ. ಸತೀಶ್ಚಂದ್ರ ಎಸ್,  ಶ್ರೀಮತಿ ಸುಪ್ರಿಯಾ ಹರ್ಷೇಂದ್ರಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗಮನ ಸೆಳೆದ ಧ್ವಜ ಹಸ್ತಾಂತರ: ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಧ್ಜಜ ಹಸ್ತಾಂತರಿಸಿ ನಾಗರಿಕತ್ವದ ಹಿರಿಮೆಯನ್ನು ಪರಿಚಯಿಸುವ ಕಾರ್ಯಕ್ರಮ ಗಮನ ಸೆಳೆಯಿತು.

ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಧ್ವಜ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಉಜಿರೆಯ ವಿವಿಧ ಕ್ಷೇತ್ರಗಳ 75 ಗಣ್ಯಮಾನ್ಯರು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಧ್ವಜ ಹಸ್ತಾಂತರಿಸಿದರು.

ಕಾರ್ಯಕ್ರಮವನ್ನು ಉಜಿರೆ ಎಸ್.ಡಿ.ಎಂ ಪದವಿಪೂರ್ವ ಕಾಲೇಜಿನ ಸುನಿಲ್ ಪಂಡಿತ್ ಅವರು ನಿರೂಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ