ಅಜ್ಜನ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ 5ರ ಬಾಲಕಿ | ಕೆಲವೇ ಕ್ಷಣದಲ್ಲಿ ನಡೆದಿತ್ತು ಅನಾಹುತ! - Mahanayaka
12:37 AM Thursday 16 - October 2025

ಅಜ್ಜನ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ 5ರ ಬಾಲಕಿ | ಕೆಲವೇ ಕ್ಷಣದಲ್ಲಿ ನಡೆದಿತ್ತು ಅನಾಹುತ!

moodubidire
13/07/2021

ಮೂಡುಬಿದಿರೆ: ರಸ್ತೆ ದಾಟಲು ಯತ್ನಿಸಿದ 5 ವರ್ಷ ವಯಸ್ಸಿನ ಬಾಲಕಿಗೆ ಕಾರು ಡಿಕ್ಕಿಯಾಗಿದ್ದು, ಪರಿಣಾಮವಾಗಿ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೂಡುಬಿದಿರೆ ತಾಲೂಕಿನ ತೋಡಾರು ಸಮೀಪದ ಹಂಡೇಲು ಎಂಬಲ್ಲಿ ನಡೆದಿದೆ.


Provided by

ಹಂಡೇಲಿನ ಅಬುಸ್ವಾಲಿಹ್ ಎಂಬವರ ಪುತ್ರಿ  ಅಜ್ಮಾ ಫಾತಿಮಾ ಮೃತಪಟ್ಟ ಮಗುವಾಗಿದೆ. ಸೋಮವಾರ ತನ್ನ ಅಜ್ಜನ ಜೊತೆಗೆ ಅವಳಿ ಸಹೋದರಿಯರು ಅಂಗಡಿಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದ ವೇಳೆ ಹಂಡೇಲು ದೇವಿನಗರ ಕ್ರಾಸ್ ಬಳಿ ಅಜ್ಮಾ ಅಜ್ಜನ ಕೈ ಬಿಡಿಸಿಕೊಂಡು ರಸ್ತೆ ದಾಟಲು ಓಡಿದ್ದಾಳೆ. ಈ ವೇಳೆ ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಮಗುವಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಬಾಲಕಿ ದಾರಿ ಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ಬಾಲಕಿಯ ತಂದೆ ಅಬುಸ್ವಾಲಿಹ್ ವಿದೇಶದಲ್ಲಿ ಕೆಲಸದಲ್ಲಿದ್ದಾರೆ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಇನ್ನಷ್ಟು ಸುದ್ದಿಗಳು…

ಶ್ವಾಸನಾಳದಲ್ಲಿ ಜೀರುಂಡೆ ಸಿಲುಕಿ 1 ವರ್ಷದ ಮಗು ದಾರುಣ ಸಾವು

ಐಸ್ ಕ್ರೀಂನಲ್ಲಿ ಇಲಿಯ ವಿಷ ಬೆರೆಸಿ ಮಕ್ಕಳಿಗೆ ನೀಡಿದ ತಂದೆ | 5 ವರ್ಷದ ಮಗು ಸಾವು, ಇನ್ನಿಬ್ಬರು ಗಂಭೀರ

ಜನಸಂಖ್ಯೆ ನಿಯಂತ್ರಿಸಲು ಮುಂದಿನ 20 ವರ್ಷ ವಿವಾಹವನ್ನೇ ನಿಷೇಧಿಸಿ: ಯೋಗಿಗೆ ತಿರುಗೇಟು ನೀಡಿದ ಸಂಸದ

ಬಾಲಕನ ಮೇಲೆ ದಾಳಿ ನಡೆಸಿದ 8 ಬೀದಿನಾಯಿಗಳು | ಗಂಭೀರ ಗಾಯಗೊಂಡ ಬಾಲಕ ಸಾವು

ಇತ್ತೀಚಿನ ಸುದ್ದಿ