ಅಜ್ಜಾವರ ಗ್ರಾಮದ ಮೇನಾಲದಲ್ಲಿ ಸರ್ಕಾರಿ ಜಾಗ ಒತ್ತುವರಿ: ಕಾನೂನು ಕ್ರಮಕ್ಕೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಒತ್ತಾಯ - Mahanayaka
10:03 PM Friday 19 - December 2025

ಅಜ್ಜಾವರ ಗ್ರಾಮದ ಮೇನಾಲದಲ್ಲಿ ಸರ್ಕಾರಿ ಜಾಗ ಒತ್ತುವರಿ: ಕಾನೂನು ಕ್ರಮಕ್ಕೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ಒತ್ತಾಯ

ambedkar adarsha samithi
01/10/2022

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲ ಪರಿಶಿಷ್ಟ ಜಾತಿ ಕಾಲೋನಿ ಸ.ನಂ.155ರ ಹತ್ತಿರ ಸುಮಾರು 2 ಎಕರೆಯಷ್ಟು ಸರ್ಕಾರಿ ಜಾಗವಿದ್ದು, ಸದಾನಂದ ರೈ ಎಂಬವರು ಅತಿಕ್ರಮಿಸಿಕೊಂಡಿರುತ್ತಾರೆ. ಕೂಡಲೇ ಅಕ್ರಮ ಒತ್ತುವರಿ ತೆರವುಗೊಳಿಸಿ, ಈ ಸ್ಥಳವನ್ನು ಸಾರ್ವಜನಿಕ ಉದ್ದೇಶಕ್ಕೆ ಕಾದಿರಿಸಲು ಅಂಬೇಡ್ಕರ್ ಆದರ್ಶ ಸೇವಾ ಸಮಿತಿ  ಸುಳ್ಯ ತಾಲೂಕು ಅಜ್ಜಾವರ ಘಟಕ ಒತ್ತಾಯಿಸಿದ್ದಾರೆ.

ಅಂಬೇಡ್ಕರ್ ಆದರ್ಶ ಸೇವಾ ಸಮಿತಿ  ಅಧ್ಯಕ್ಷರಾದ ಹರೀಶ್ ಮೇನಾಲರವರು ಅಜ್ಜಾವರ ಪಂಚಾಯತ್ ವಿ.ಎ. ಅವರ ಮೂಲಕ ಈ ಸಂಬಂಧ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ದಲಿತ ಹಿರಿಯ ಮುಖಂಡರಾದ ದಾಸಪ್ಪ ಪಲ್ಲತ್ತಡ್ಕ, ಸಂಘಟನೆಯ ಪದಾಧಿಕಾರಿಗಳಾದ ಕುಶಾಲಪ್ಪ ಮೇನಾಲ, ದಿನೇಶ್ ಮೇನಾಲರವರು ಸೇರಿದಂತೆ ಕಾಲೋನಿ ನಿವಾಸಿಗಳು ಹಾಜರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ