ಅಜ್ಜಿಯನ್ನು ತಳ್ಳುಗಾಡಿಯಲ್ಲಿ ಪಡಿತರ ಅಂಗಡಿಗೆ ಕರೆದೊಯ್ದ 9 ವರ್ಷದ ಅವಳಿ ಸಹೋದರರು - Mahanayaka
1:18 AM Thursday 16 - October 2025

ಅಜ್ಜಿಯನ್ನು ತಳ್ಳುಗಾಡಿಯಲ್ಲಿ ಪಡಿತರ ಅಂಗಡಿಗೆ ಕರೆದೊಯ್ದ 9 ವರ್ಷದ ಅವಳಿ ಸಹೋದರರು

15/01/2021

ಚೆನ್ನೈ: ತಳ್ಳುವ ಗಾಡಿಯಲ್ಲಿ 70 ವರ್ಷದ ವೃದ್ಧೆಯನ್ನು ಮಲಗಿಸಿ ಪಡಿತರ ಅಂಗಡಿಗೆ ಇಬ್ಬರು ಅವಳಿ ಸಹೋದರರು ಸಾಗಿಸಿರು ವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು,  ಪಡಿತರ ಅಂಗಡಿಗೆ ತೆರಳಲು ಸಾಧ್ಯವಾಗದೇ ಕಷ್ಟಪಡುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಕ್ಕಳು ವೃದ್ಧೆಗೆ ನೆರವು ಮಾಡಿದ್ದಾರೆ.


Provided by

ಈ ವೃದ್ಧೆಗೆ  70 ವರ್ಷ ವಯಸ್ಸಾಗಿದ್ದು, ತಮ್ಮ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುವ ಜವಾಬ್ದಾರಿಯನ್ನು ಹೊಂದಿದ್ದಾರೆ.  ಪೊಂಗಲ್ ಪ್ರಯುಕ್ತ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳ ಮೂಲಕ 2,500 ರೂಪಾಯಿ, ಕಬ್ಬು, ಬಟ್ಟೆಗಳನ್ನು ನೀಡುತ್ತಿದ್ದು,  ಇದನ್ನು ಪಡೆದುಕೊಳ್ಳಲು ವೃದ್ಧೆ ಮನೆಯಿಂದ ಹೊರ ಬಂದಿದ್ದು, ನಡೆಯಲು ಸಾಧ್ಯವಾಗದೇ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ.

ರಸ್ತೆಯಲ್ಲಿ ಆಟವಾಡುತ್ತಿದ್ದ ಇಬ್ಬರು ಅವಳಿ ಸಹೋದರರು ಅಜ್ಜಿಯ ಕಷ್ಟವನ್ನು ನೋಡಿ, ಬಿದ್ದಿದ್ದ ಅಜ್ಜಿಯನ್ನು ಎಬ್ಬಿಸಿ, ತಳ್ಳುಗಾಡಿಯಲ್ಲಿ ಮಲಗಿಸಿ, ಪಡಿತರ ಅಂಗಡಿಗೆ ಕರೆದೊಯ್ದಿದ್ದಾರೆ.

ನಿತಿನ್ ಹಾಗೂ ನಿತೀಶ್ ಎಂಬ 9 ವರ್ಷ ವಯಸ್ಸಿನ ಅವಳಿ ಸಹೋದರರು ಪೊಂಗಲ್ ದಿನದ ಸರ್ಕಾರದ ಸವಲತ್ತನ್ನು ಪಡೆಯಲು ವೃದ್ಧೆಗೆ ಸಹಾಯ ಮಾಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇತ್ತೀಚಿನ ಸುದ್ದಿ