KAS ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕ್ಕ ಐಎಎಸ್ ಅಕಾಡೆಮಿಯಿಂದ ಸನ್ಮಾನ - Mahanayaka
5:38 AM Saturday 20 - December 2025

KAS ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕ್ಕ ಐಎಎಸ್ ಅಕಾಡೆಮಿಯಿಂದ ಸನ್ಮಾನ

akka ias academy
23/09/2022

ಬೆಂಗಳೂರು: 2017-18ನೇ ಸಾಲಿನ KAS ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಕ್ಕ ಐಎಎಸ್ ಅಕಾಡೆಮಿ(Akka IAS Academy) ವತಿಯಿಂದ ಇತ್ತೀಚೆಗೆ ಅಭಿನಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ಡಾ.ಶಿವಕುಮಾರ ಸ್ಪೂರ್ತಿದಾಯಕ ಮಾತುಗಳು


ಬೆಂಗಳೂರಿನ ಬಂಟರ ಸಂಘದ ಕಟ್ಟಡದಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿನೋದ್ ಕುಮಾರ್ ಡಾಂಗೆ ಉದ್ಘಾಟಿಸಿದರು. ಅಕ್ಕ ಐಎಎಸ್ ಅಕಾಡೆಮಿಯ ನಿರ್ದೇಶಕರಾದ ಡಾ.ಶಿವಕುಮಾರ ಅವರು ಅಧ್ಯಕ್ಷತೆ ವಹಿಸಿದ್ದರು.

ಡಾ.ಶಿವಕುಮಾರ ಹಾಗೂ ಎಸ್.ವಿ.ಪಾಟೀಲ್ ಅವರು ಮಾತನಾಡಿ,  ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ, ಅಭಿನಂದನೆ ಸಲ್ಲಿಸಿದರು.

ಸಾಧಕ ಅಭ್ಯರ್ಥಿಗಳಿಗೆ ಗಣ್ಯರಿಂದ ಸನ್ಮಾನ


ಐಎಎಸ್ ತರಬೇತುದಾರರಾದ ಎಸ್.ವಿ.ಪಾಟೀಲ್, IRS ಅಧಿಕಾರಿ ಭೈರಪ್ಪ, IPoS ಅಧಿಕಾರಿ ಬಸವರಾಜ ವಾಲೀಕಾರ್, KAS ಅಧಿಕಾರಿಗಳಾದ ಸೋನಿಯಾ ವರ್ಣೇಕರ್, ಗಿರಿಧರ್ ಪೂಜಾರ್, ಲಿಂಗರಾಜು ಎಂ. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಅಕಾಡೆಮಿಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾದ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು


ಪಾಸಾದ ಅಭ್ಯರ್ಥಿಗಳು, ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು ಹಾಗೂ ಗುರುಗಳಾದ ಡಾ.ಶಿವಕುಮಾರ್ ಸಾರ್ ಹಾಗು ಎಸ್.ವಿ.ಪಾಟೀಲ್ ಸಾರ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ