ಅಕ್ಕನ ಜೊತೆಗೆ ಆಟವಾಡುತ್ತಿದ್ದ ಪುಟ್ಟ ಮಗು ಕ್ಷಣ ಮಾತ್ರದಲ್ಲೇ ಸಾವು | ಏನಿದು ಘಟನೆ? - Mahanayaka
5:29 AM Thursday 16 - October 2025

ಅಕ್ಕನ ಜೊತೆಗೆ ಆಟವಾಡುತ್ತಿದ್ದ ಪುಟ್ಟ ಮಗು ಕ್ಷಣ ಮಾತ್ರದಲ್ಲೇ ಸಾವು | ಏನಿದು ಘಟನೆ?

20/01/2021

ಮೈಸೂರು: ತನ್ನ ಅಕ್ಕನ ಜೊತೆಗೆ ಆಟವಾಡುತ್ತಿದ್ದ ಪುಟ್ಟ ಕಂದಮ್ಮ,  ಕೆಲವೇ ಕ್ಷಣಗಳಲ್ಲಿ ನೀರಿನ ಸಂಪಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಮನಕಲಕುವ ಘಟನೆ ಹುಣಸೂರು ತಾಲೂಕಿನ ತೆಂಕಲಕೊಪ್ಪಲು ಗ್ರಾಮದಲ್ಲಿ ನಡೆದಿದೆ.


Provided by

ಇಲ್ಲಿನ ತೆಂಕಲಕೊಪ್ಪಲಿನ ನಟರಾಜ್ ಎಂಬವರ ಒಂದೂವರೆ ವರ್ಷದ ದಯಾನಂದ ಮೃತಪಟ್ಟ ಮಗುವಾಗಿದ್ದು, ನಿರ್ಮಾಣ ಹಂತದ  ಮನೆಯ ಮುಂದಿನ ಸಂಪಿಗೆ ಬಿದ್ದ ಪರಿಣಾಮ ಮಗು ಮೃತಪಟ್ಟಿದೆ.

ಮಗು ತನ್ನ ಅಕ್ಕನ ಜೊತೆಗೆ ಆಟವಾಡುತ್ತಿತ್ತು. ಅಕ್ಕ ಮನೆಯ ಒಳಗೆ ಹೋಗಿ ಹೊರ ಬರುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು. ಈ ವೇಳೆ ಮನೆಯವರು ತೀವ್ರ ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ನೀರಿನ ಸಂಪಿನಲ್ಲಿ ಪತ್ತೆಯಾಗಿದೆ.

ಇತ್ತೀಚಿನ ಸುದ್ದಿ