ಅಕ್ಬರ್, ಔರಂಗಜೇಬನ ಬಗ್ಗೆ ಪಠ್ಯಪುಸ್ತಕಗಳಲ್ಲಿ ಕಲಿಯಲು ತುಂಬಾ ಇದೆ: ನಟ ಅಕ್ಷಯ್ ಕುಮಾರ್ ಹೇಳಿಕೆ - Mahanayaka
11:15 AM Thursday 16 - October 2025

ಅಕ್ಬರ್, ಔರಂಗಜೇಬನ ಬಗ್ಗೆ ಪಠ್ಯಪುಸ್ತಕಗಳಲ್ಲಿ ಕಲಿಯಲು ತುಂಬಾ ಇದೆ: ನಟ ಅಕ್ಷಯ್ ಕುಮಾರ್ ಹೇಳಿಕೆ

24/01/2025

ಇತಿಹಾಸದ ಪುಸ್ತಕಗಳಲ್ಲಿ ಸಾಕಷ್ಟು ಬದಲಾವಣೆ ಮಾಡಬೇಕಾಗಿದೆ. ಅಕ್ಬರನ ಬಗ್ಗೆಯೋ ಅಥವಾ ಔರಂಗಜೇಬನ ಬಗ್ಗೆಯೋ ಪಠ್ಯಪುಸ್ತಕಗಳಲ್ಲಿ ನಮಗೆ ಕಲಿಯುವುದಕ್ಕೆ ಧಾರಾಳ ಇದೆ. ಆದರೆ ನಮ್ಮದೇ ಹೀರೋಗಳ ಕುರಿತು ನಾವು ಪುಸ್ತಕಗಳಲ್ಲಿ ಕಲಿಯುವುದಕ್ಕೆ ಏನೇನೂ ಸಿಗುತ್ತಿಲ್ಲ. ನಮ್ಮದೇ ಹೀರೋಗಳನ್ನು ನಾವು ಎತ್ತಿ ಹೇಳಬೇಕಿದೆ ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ. ನ್ಯೂಸ್ 18 ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Provided by

ನಮ್ಮ ಸೇನೆಯಲ್ಲಿಯೇ ಇಂತಹ ಹತ್ತು ಹಲವು ಕಥೆಗಳಿವೆ. ಪರಮವೀರ ಚಕ್ರವನ್ನು ನೀಡಿ ಸನ್ಮಾನಿಸಿದ ಅನೇಕ ಯೋಧರಿದ್ದಾರೆ. ಇತಿಹಾಸದ ಪುಸ್ತಕಗಳನ್ನ ಪರಿಷ್ಕರಿಸಬೇಕು. ಇಂತಹ ನಾಯಕರ ಕಥೆಗಳನ್ನ ಮುಂದಿನ ಪೀಳಿಗೆಗೆ ಕಲಿಸಬೇಕು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ