ಆಟೋ ರಿಕ್ಷಾದಲ್ಲಿ ಮಾಂಸ ಸಾಗಾಟ ಆರೋಪ: ವ್ಯಕ್ತಿ ಅರೆಸ್ಟ್ ! - Mahanayaka
5:11 PM Wednesday 10 - September 2025

ಆಟೋ ರಿಕ್ಷಾದಲ್ಲಿ ಮಾಂಸ ಸಾಗಾಟ ಆರೋಪ: ವ್ಯಕ್ತಿ ಅರೆಸ್ಟ್ !

arest
11/09/2023

ಆಟೋ ರಿಕ್ಷಾದಲ್ಲಿ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ಓರ್ವ ವ್ಯಕ್ತಿಯನ್ನು ಮಂಗಳೂರು ನಗರದ ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.


Provided by

ಬಂಧಿತ ವ್ಯಕ್ತಿಯನ್ನು ದಾವೂದ್ ಎಂದು ತಿಳಿದು ಬಂದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಬದ್ರುದ್ದೀನ್ ಮತ್ತು ಯಾಸೀನ್ ಎಂಬವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ 97/2023ರಲ್ಲಿ 4, 12 ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ತಡೆ ಕಾಯ್ದೆ 2020ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಇತ್ತೀಚಿನ ಸುದ್ದಿ