ವಿ.ಎಚ್.ಪಿ ಮುಖಂಡ ಶರಣ್ ಪಂಪ್ವೆಲನ್ನು ತಕ್ಷಣವೇ ಬಂಧಿಸಿ; ಪೊಲೀಸ್ ಪೇದೆಯೊಬ್ಬರ ಮೇಲಿನ ಆರೋಪ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ: ಡಿವೈಎಫ್ ಐ - Mahanayaka
12:30 PM Wednesday 17 - September 2025

ವಿ.ಎಚ್.ಪಿ ಮುಖಂಡ ಶರಣ್ ಪಂಪ್ವೆಲನ್ನು ತಕ್ಷಣವೇ ಬಂಧಿಸಿ; ಪೊಲೀಸ್ ಪೇದೆಯೊಬ್ಬರ ಮೇಲಿನ ಆರೋಪ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ: ಡಿವೈಎಫ್ ಐ

dyfi
06/05/2025

ಮಂಗಳೂರು: ಸುಹಾಸ್ ಶೆಟ್ಟಿ ಕೊಲೆ ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ 144 ನಿಷೇಧಾಜ್ಞೆ ವಿಧಿಸಿದ್ದರೂ, ಸಂಘಪರಿವಾರ ಶವ ಮೆರವಣಿಗೆ ನಡೆಸಿದ್ದರು. ಅಲ್ಲದೆ ವಿ.ಎಚ್.ಪಿ. ಮುಖಂಡ ಶರಣ್ ಪಂಪ್ವೆಲ್ ಪ್ರಚೋದನಾಕಾರಿ ಹೇಳಿಕೆ ನೀಡಿ ದ.ಕ ಜಿಲ್ಲೆ ಬಂದ್ ಗೆ ಕರೆ ನೀಡಿದ್ದ ಹಿನ್ನಲೆಯಲ್ಲಿ ಅಲ್ಲಲ್ಲಿ ಅಮಾಯಕ ಮುಸ್ಲಿಂ ಸಮುದಾಯದ ಯುವಕರನ್ನು ಗುರಿಯಾಗಿಸಿ ಹತ್ಯೆ ಮಾಡುವ ಪ್ರಯತ್ನದಿಂದ ಪ್ರಕ್ಷುಬ್ದ ವಾತಾವರಣ ನಿರ್ಮಿಸಿರುವ ಶರಣ್ ಪಂಪ್ವೆಲ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರೂ, ಈವರೆಗೂ ಆತನನ್ನು ಬಂಧಿಸದಿರುವುದನ್ನು ಡಿವೈಎಫ್ ಐ ಖಂಡಿಸುತ್ತದೆ. ಹಾಗೂ ಈ ಕೂಡಲೇ ಆತನನ್ನು  ಬಂಧಿಸಬೇಕೆಂದು ಡಿವೈಎಫ್ ಐ ದ.ಕ. ಜಿಲ್ಲಾ ಸಮಿತಿಯು ಒತ್ತಾಯಿಸಿದೆ.


Provided by

ಸಂಘಪರಿವಾರ, ಬಿಜೆಪಿ ಪಕ್ಷದ ಮುಖಂಡರು ಮತ್ತು ಶಾಸಕರುಗಳು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೋಮು ಪ್ರಚೋದಿತ, ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ನಿಂದಿಸುವಂತಹ ಉದ್ರೇಕಕಾರಿ ಭಾಷಣವನ್ನು ಮಾಡುತ್ತಿದ್ದರೂ ಪೊಲೀಸ್ ಇಲಾಖೆ ಈ ಬಗ್ಗೆ ಸರಿಯಾದ ಕ್ರಮವನ್ನು ಕೈಗೊಳ್ಳುತ್ತಿಲ್ಲ. ಈ ಸಂಬಂಧಿತ ಕೇವಲ ದೂರುಗಳು ಬಂದರೆ ವಿರೋಧಗಳು ವ್ಯಕ್ತವಾದರೆ ಮಾತ್ರವೇ ಹೆಸರಿಗಷ್ಟೇ ಕೇಸು ದಾಖಲಾಗುತ್ತದೆಯೇ ಹೊರತು ಬಂಧಿಸುವ ಹಂತಕ್ಕೆ ಮುಂದಾಗದುವುದಿಲ್ಲ . ನಿಷೇದಾಜ್ಞೆ ಜಾರಿಯ ವೇಳೆಯೂ ಇಂತಹ ಭಾಷಣಗಳಿಗೆ ಅವಕಾಶ ನಿರಾಕರಿಸುವ ನಿಟ್ಟಿನಲ್ಲಿ ಕ್ರಮಗಳು ಜರಗಿಸದಿರುವುದು ದುರಂತ ಎಂದಿದೆ.

ಈಗಾಗಲೇ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ನಡೆದ ನಂತರ ಜಿಲ್ಲೆಯಲ್ಲಿ ಸಂಘವಾರ ಸೃಷ್ಟಿಸಿದ ಪ್ರಕ್ಷುಬ್ದ ಆತಂಕಮಯ ವಾತಾವರಣದಿಂದ ಕಣ್ಣೂರು, ಕುಂಟಿಕಾನ, ತೊಕ್ಕೊಟ್ಟು ಭಾಗಗಳಲ್ಲಿ ಅಮಾಯಕ ಮುಸ್ಲಿಂ ಯುವಕರ ಹತ್ಯೆಗೆ ಯತ್ನದಂತಹ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದ ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು. ಅದೇ‌ ರೀತಿ ಪಂಜಿಮೊಗರು ಇತರೆ ಭಾಗಗಳಲ್ಲಿ ಬಹಿರಂಗವಾಗಿ ತಲವಾರು, ಮಾರಕಾಯುಧಗಳನ್ನು ತೋರಿಸುತ್ತಾ ಕೊಲೆ ಬೆದರಿಕೆಗಳನ್ನು ಓಡ್ಡಿರುವ ಘಟನೆಗಳಿಗೆ ಸಂಬಂಧಿಸಿ ಸ್ಥಳೀಯ ಠಾಣೆಗಳಲ್ಲಿ ದೂರು ನೀಡಿಲಾಗಿದೆ ಈ ಬಗ್ಗೆ ತಪ್ಪಿತಸ್ತರನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸಲು ಡಿವೈಎಫ್ ಐ ಒತ್ತಾಯಿಸಿದೆ.

ಈ ನಡುವೆ ಸುಹಾಸ್ ಕೊಲೆ ಪ್ರಕರಣಕ್ಕೆ ಸಂಭಂದಪಟ್ಟು ಸಂಘಪರಿವಾರ ದಿನಕ್ಕೊಂದು ಸುಳ್ಳು ಆರೋಪಗಳನ್ನು ಹೊರಿಸಿ ಧರ್ಮ ಧರ್ಮಗಳ ನಡುವೆ ಪರಸ್ಪರ ಅಪನಂಬಿಕೆ ಸೃಷ್ಟಿಸುವ ಮೂಲಕ ಗಲಭೆ ಹುಟ್ಟುಹಾಕಲು ಪ್ರಯತ್ನಿಸುತ್ತಿದೆ. ಬಜ್ಪೆ ಪೊಲೀಸ್ ಠಾಣೆಯ ಪೇದೆಯೊಬ್ಬರು ಮುಸ್ಲಿಂ ಎನ್ನುವ ಕಾರಣಕ್ಕೆ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಈಗಾಗಲೇ ಅಶಾಂತಿಯ ಸ್ಥಿತಿಯಲ್ಲಿರುವ ಮಂಗಳೂರಿನ ವಾತಾವರಣವನ್ನು ಮತ್ತಷ್ಟು ಹದಗೆಡುವಂತೆ ಮಾಡಿ ಸಮಾಜದಲ್ಲಿ ದ್ವೇಷ ಹರಡುವಂತೆ ಸಂಘಪರಿವಾರ ಯತ್ನಿಸುತ್ತಿವೆ. ಅದೇ ರೀತಿ ನಗರದ ಪೊಲೀಸ್ ಇಲಾಖೆ ಮತ್ತು  ಕಮೀಷನರ್ ಶಾಮೀಲಾತಿ ಬಗ್ಗೆ ಬಿಜೆಪಿ ಶಾಸಕರೂ ಸಹಿತ ಆರೋಪಗಳನ್ನು ಹೊರಿಸುತ್ತಿದ್ದಾರೆ. ಆ ಪ್ರಕರಣದಲ್ಲಿ ಪೊಲೀಸ್ ಪಾತ್ರದ ಬಗ್ಗೆ ಸಂದೇಹವಿದ್ದಲ್ಲಿ ಈ ಕುರಿತು ಸಮಗ್ರ ತನಿಖೆ ನಡೆಯಲಿ. ಅಲ್ಲದೇ ಕೇವಲ ಪೇದೆಯ ಧರ್ಮದ ಕಾರಣಕ್ಕಾಗಿ ಆತನ ವಿರುದ್ಧ ವ್ಯವಸ್ಥಿತವಾಗಿ ಸುಳ್ಳು ಆರೋಪಗಳನ್ನು ಹೊರಿಸಿ ಮತೀಯ ದ್ವೇಷ ಹರಡುವ ಉದ್ದೇಶವಾದಲ್ಲಿ ಈ ಬಗ್ಗೆ ಸುಳ್ಳು ಆರೋಪ ಹೊರಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಿತ ಸುಳ್ಳು ಸುದ್ದಿ ಹರಡುವ ಸಂಘಪರಿವಾರ ಪ್ರೇರಿತ ಸಂಘಟನೆ ಮತ್ತು ಮುಖಂಡರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಡಿವೈಎಫ್ ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸಿದೆ ಎಂದು ಜಿಲ್ಲಾಧ್ಯಕ್ಷರಾದ ಬಿ.ಕೆ.ಇಮ್ತಿಯಾಜ್ ಮತ್ತು ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ