ಎಟಿಎಂ ಕೇಂದ್ರದ ಬಳಿ ಸಹಾಯ ಮಾಡುವ ನೆಪದಲ್ಲಿ ಈತ ಅಮಾಯಕರನ್ನು ಹೇಗೆ ದೋಚುತ್ತಿದ್ದ ಗೊತ್ತಾ? - Mahanayaka
12:44 PM Tuesday 27 - January 2026

ಎಟಿಎಂ ಕೇಂದ್ರದ ಬಳಿ ಸಹಾಯ ಮಾಡುವ ನೆಪದಲ್ಲಿ ಈತ ಅಮಾಯಕರನ್ನು ಹೇಗೆ ದೋಚುತ್ತಿದ್ದ ಗೊತ್ತಾ?

atm
05/04/2021

ಬೀದರ್: ಎಟಿಎಂ ಕೇಂದ್ರಗಳ ಬಳಿಯಲ್ಲಿ ಸುತ್ತಾಡುತ್ತಾ ಅಮಾಯಕರನ್ನು ಮೋಸಗೊಳಿಸಿದೋಚುತ್ತಿದ್ದ ಆಂದ್ರಪ್ರದೇಶದ ವ್ಯಕ್ತಿಯೋರ್ವನನ್ನು ಸೋಮವಾರ ಸಿಇಎನ್ ಕ್ರೈಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಂದ್ರಪ್ರದೇಶದ ನರಸರಾವಪೇಟ್ ಪಟ್ಟಣದ 39 ವರ್ಷ ವಯಸ್ಸಿನ ತುಮ್ಮಲ್ ಉದಯಕುಮಾರ ರಾಮಲಿಂಗಯ್ಯ  ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ  1.18 ಲಕ್ಷ ರೂ. ನಗದು ಹಾಗೂ ವಿವಿಧ ಬ್ಯಾಂಕಿನ 112 ಎಟಿಎಂ ಕಾರ್ಡ್ ಹಾಗೂ ಒಂದು ಬೈಕ್‌ನ್ನು ಜಪ್ತಿ ಮಾಡಿಕೊಂಡಿದ್ದಾರೆ.

ನಗರದ ಕೆಇಬಿ ಹತ್ತಿರದ ಎಸ್‌ ಬಿಐ ಎಟಿಎಂ ಎದುರುಗಡೆ ಉದಯಕುಮಾರ ಅವರನ್ನು ಕ್ರೈಂ ಪೊಲೀಸ್ ಠಾಣೆಯ ನಿರೀಕ್ಷಕ ಬಸವರಾಜ ಫುಲಾರಿ ನೇತೃತ್ವದ ಸಿಬ್ಬಂದಿ ತಂಡ ದಸ್ತಗಿರಿ ಮಾಡಿ ವಿಚಾರಣೆ ನಡೆಸಿದೆ. ಈ ವೇಳೆ ಈತ ಬೀದರ್ ನಲ್ಲಿ ಒಟ್ಟು 4 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಇದಲ್ಲದೇ ತೆಲಂಗಾಣದಲ್ಲಿಯೂ ತನ್ನ ಕೈಚಳಕ ತೋರಿಸಿದ್ದು, ಅಲ್ಲಿ 23 ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದಾನೆ ಎಂದು ತಿಳಿದು ಬಂದಿದೆ.

ಅಮಾಯಕರು ಹಣ ತೆಗೆಯಲು ಎಟಿಎಂ ಕೇಂದ್ರಕ್ಕೆ ಹೋದಾಗ, ಒಳ್ಳೆಯ ವ್ಯಕ್ತಿಯಂತೆ ಅವರಿಗೆ ಸಹಾಯ ಮಾಡುವಂತೆ ನಟಿಸಿ, ಅವರ ಗಮನವನ್ನು ಬೇರೆ ಕಡೆಗೆ ಸೆಳೆದು ಎಟಿಎಂ ಕಾರ್ಡ್ ಬದಲಿಸುತ್ತಿದ್ದ ಆ ಬಳಿಕ ತಾನು ದೋಚಿದ ಕಾರ್ಡ್ ನ ಪಿನ್ ನಂಬರ್ ಚೇಂಚ್ ಮಾಡಿ ಅವರ ಖಾತೆಗಳಿಂದ ಹಣ ದೋಚುತ್ತಿದ್ದ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ