ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್, ರಾಜ್ಯ ದಲಿತ ನಾಯಕರನ್ನೂ ಸೋಲಿಸಿದ್ದು ಕಾಂಗ್ರೆಸ್ | ಕಟೀಲ್ ತಿರುಗೇಟು - Mahanayaka
10:11 PM Wednesday 15 - October 2025

ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್, ರಾಜ್ಯ ದಲಿತ ನಾಯಕರನ್ನೂ ಸೋಲಿಸಿದ್ದು ಕಾಂಗ್ರೆಸ್ | ಕಟೀಲ್ ತಿರುಗೇಟು

naleen kumar vs siddaramaiha
24/07/2021

ಚಿತ್ರದುರ್ಗ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಅವಮಾನ ಮಾಡಿದ್ದು ಕಾಂಗ್ರೆಸ್ ಪಕ್ಷವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್,  ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.


Provided by

ಬಿಜೆಪಿಯಿಂದ ದಲಿತ ಸಿಎಂ ಮಾಡಿ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಕಾಂಗ್ರೆಸ್ ನ ಮೊದಲ ಸಚಿವ ಸಂಪುಟದಲ್ಲಿಯೇ ಅಂಬೇಡ್ಕರ್ ನೋವಿನಿಂದ ಹೊರಗೆ ಬಂದಿದ್ದರು. ಅಂಬೇಡ್ಕರ್ ಲೋಕಸಭೆ ಚುನಾವಣೆಗೆ ನಿಂತಾಗ ಸೋಲಿಸಿದ್ದು ಕಾಂಗ್ರೆಸ್, 2ನೇ ಬಾರಿ ಅವರ ಸಹಾಯಕನನ್ನು ಎದುರು‌ ನಿಲ್ಲಿಸಿ ಸೋಲಿಸಿದರು. ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಅವರಿಗೆ ಭಾರತರತ್ನ ಪುರಸ್ಕಾರವನ್ನು ಕೊಡಲಿಲ್ಲ, ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ನಾವು ಎಂದು ಅವರು ಹೇಳಿದರು.

ಕಾಂಗ್ರೆಸ್ ಜಗಜೀವನ್ ರಾಮ್ ರನ್ನು ಪ್ರಧಾನಿ ಮಾಡಲಿಲ್ಲ. ಸಿದ್ಧರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಸಿಎಂ ಆದವರು. ಡಾ.ಜಿ.ಪರಮೇಶ್ವರ್ ಅವರನ್ನು ಡಿಸಿಎಂ ಮಾಡಲಿಲ್ಲ, ಬದಲಾಗಿ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ, ಬಿ.ಎನ್.ಚಂದ್ರಪ್ಪ, ಧ್ರುವನಾರಾಯಣ, ಸೇರಿದಂತೆ ದಲಿತ ಮುಖಂಡರನ್ನು ಸೋಲಿಸಿದರು. ಈವತ್ತಿಗೂ ಖರ್ಗೆ, ಪರಮೇಶ್ವರ್ ಮುಂದಕ್ಕೆ ಬರಲು ಬಿಡುತ್ತಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಟೀಕಿಸಿದರು.

ಇನ್ನಷ್ಟು ಸುದ್ದಿಗಳು…

ಈಗ ಅವಕಾಶವಿದೆ, ದಲಿತ ಸಿಎಂ ಮಾಡಿ ತೋರಿಸಿ | ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯ ಸವಾಲು

“BSP ಗೆದ್ದು ಬಂದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ” | ಬಿಎಸ್ ಪಿಯಿಂದ ಅಚ್ಚರಿಯ ಹೇಳಿಕೆ

ದಲಿತ ಸಿಎಂ ವಿಚಾರ: ಸಿದ್ದರಾಮಯ್ಯಗೆ ಬಿಜೆಪಿಗೆ ಸವಾಲು ಹಾಕುವ ಯೋಗ್ಯತೆ ಇಲ್ಲ | ಕೆ.ಎಸ್.ಈಶ್ವರಪ್ಪ

ಬಿಜೆಪಿಗೆ ರಾಜೀನಾಮೆ ಪರ್ವ ಆರಂಭವಾಗುತ್ತಾ? | 2ನೇ ಅಸ್ತ್ರ ಪ್ರಯೋಗಕ್ಕೆ ಸಜ್ಜು!

ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ 16 ವರ್ಷದ ಬಾಲಕಿಯನ್ನು ಕೊಂದರು!

ಆಸ್ತಿಯನ್ನು ಭಾಗ ಮಾಡಿಕೊಡಲಿಲ್ಲ ಎಂದು ತಾಯಿಯನ್ನು ಬೀದಿಗೆ ತಳ್ಳಿದ ಮಕ್ಕಳು

ಇತ್ತೀಚಿನ ಸುದ್ದಿ