ಅಂಬೇಡ್ಕರ್ ಭಾವ ಚಿತ್ರವನ್ನು ಮುರಿದೆಸೆದ ಪೊಲೀಸರು | ವಿಡಿಯೋ ವೈರಲ್ - Mahanayaka
1:49 AM Thursday 29 - January 2026

ಅಂಬೇಡ್ಕರ್ ಭಾವ ಚಿತ್ರವನ್ನು ಮುರಿದೆಸೆದ ಪೊಲೀಸರು | ವಿಡಿಯೋ ವೈರಲ್

ambedkar
19/04/2021

ಬೆಂಗಳೂರು:  ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯ ಸಂದರ್ಭ ಪ್ರತಿಭಟನಾಕಾರರು ಹಿಡಿದುಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವ ಚಿತ್ರವನ್ನು ಪೊಲೀಸರು ಮುರಿದು ಎಸೆದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಮಾಹಿತಿಗಳ ಪ್ರಕಾರ, ಗಾಂಧಿನಗರದ   ಕೋಡಿಹಳ್ಳಿ ಚಂದ್ರಶೇಖರ್ ಅವರ ಕಚೇರಿಯಲ್ಲಿ ಫ್ರೀಡಂ ಪಾರ್ಕ್ ಗೆ ತೆರಳಲು ಪ್ರತಿಭಟನಾಕಾರರು ಅಂಬೇಡ್ಕರ್ ಹಾಗೂ ಗಾಂಧೀಜಿ ಫೋಟೋವನ್ನು ಹಿಡಿದುಕೊಂಡು ಹೊರಡಲು ಸಿದ್ಧತೆ ನಡೆಸಿದ್ದರು.

ಈ ವೇಳೆ ಪೊಲೀಸರು ಏಕಾಏಕಿ ಕಚೇರಿಗೆ ನುಗ್ಗಿದ್ದು, ಅಂಬೇಡ್ಕರ್ ಫೋಟೋವನ್ನು ಹಿಡಿದು ಎಳೆದಾಡಿದ್ದು, ಭಾವ ಚಿತ್ರ ಮುರಿದ ವೇಳೆ ಅದನ್ನು ಅಲ್ಲಿಯೇ ಎಸೆಯುವ ಮೂಲಕ ಅವಮಾನಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾರೀ ಪ್ರತಿಭಟನೆ ವ್ಯಕ್ತವಾಗುವ ಸಾಧ್ಯತೆಗಳು ಕಂಡು ಬಂದಿದೆ. ಸರ್ಕಾರವು ತಕ್ಷಣವೇ ಈ ಸಂಬಂಧ ವಿಕೃತಿ ಮೆರೆದವರನ್ನು ಕರ್ತವ್ಯದಿಂದ ವಜಾಗೊಳಿಸಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ