‘ವೀರ ಸಾವರ್ಕರ್’  ಪುಸ್ತಕ ಬಿಡುಗಡೆ: ಅಂಬೇಡ್ಕರ್ ಹಾಗೂ ಸಾವರ್ಕರ್ ನಡುವೆ ಉತ್ತಮ ಸಂಬಂಧವಿತ್ತು | ಬಿ.ಎಲ್.ಸಂತೋಷ್ - Mahanayaka
8:47 PM Wednesday 20 - August 2025

‘ವೀರ ಸಾವರ್ಕರ್’  ಪುಸ್ತಕ ಬಿಡುಗಡೆ: ಅಂಬೇಡ್ಕರ್ ಹಾಗೂ ಸಾವರ್ಕರ್ ನಡುವೆ ಉತ್ತಮ ಸಂಬಂಧವಿತ್ತು | ಬಿ.ಎಲ್.ಸಂತೋಷ್

veer savarkar
19/12/2021


Provided by

ಬೆಂಗಳೂರು: ವೀರ ಸಾವರ್ಕರ್ ಬದುಕು ವರ್ತಮಾನದ ಜನಾಂಗದವರಿಗೂ ಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದರು.

ವೀರ ಸಾವರ್ಕರ್ ಕುರಿತಾದ ಪುಸ್ತಕವನ್ನು ಶನಿವಾರ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದರು. ಈ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಪುಸ್ತಕ ಬಿಡುಗಡೆಗೆ ಕರ್ನಾಟಕ ಅದೃಷ್ಟ ಮಾಡಿದೆ ಎಂದು ಹೇಳಿದರು.

ಸಾವರ್ಕರ್ ಹೆಸರಿಗೆ ನೂರಾರು ಪ್ರಥಮಗಳು ಇವೆ. ಅಂಬೇಡ್ಕರ್ ಹಾಗೂ ಸಾವರ್ಕರ್ ಅವರ ಸಂಬಂಧ ಬಹಳ ಚೆನ್ನಾಗಿತ್ತು. ಆದರೆ ಕೆಲವರು ಇದನ್ನು ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರೋಧ ಮಾಡಲಿ, ಆದರೆ ದೇಶ ಬದಲಾಗುತ್ತಿದೆ ಎಂದು ಎಂದು ಸಂತೋಷ್ ಹೇಳಿದರು.

ಉದಯ್ ಮಹೋರ್ಕರ್ ರಚಿಸಿದ ‘ವೀರ ಸಾವರ್ಕರ್’ ಪುಸ್ತಕ ಇದಾಗಿದ್ದು, ಪುಸ್ತಕ ಬಿಡುಗಡೆಗೂ ಮೊದಲು ಇತ್ತೀಚೆಗೆ ಹೆಲಿಕಾಫ್ಟರ್ ದುರಂತದಲ್ಲಿ ನಿಧನರಾದ ಬಿಪಿನ್ ರಾವತ್ ಅವರ ಭಾವ ಚಿತ್ರಕ್ಕೆ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ  ಆದಿಚುಂಚನಗಿರಿ ಮಹಾಸಂಸ್ಥಾನ ಪೀಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ, ಮಾಜಿ ಸಚಿವ ಎನ್.ಮಹೇಶ್, ಉದಯ್ ಮಹೋರ್ಕರ್ ಮೊದಲಾದವರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊಲೆಗೆ ಕೊಲೆಯೇ ಉತ್ತರವಾಯ್ತು!: ಎಸ್ ಡಿಪಿಐ ಮುಖಂಡನ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

ಆಟೋ ಮೇಲೆ ಮಗುಚಿ ಬಿದ್ದ ಬೃಹತ್ ಕಂಟೈನರ್: ನಾಲ್ವರ ದಾರುಣ ಸಾವು

ರಾತ್ರಿ ವೇಳೆ ಹೊತ್ತಿ ಉರಿದ ಎರಡು ಅಂಗಡಿಗಳು: ಮಂಗಳೂರಿನ ದುಬೈ ಮಾರ್ಕೆಟ್ ನಲ್ಲಿ ಘಟನೆ

ಯೋಗಿ ‘ಉಪಯೋಗಿ’ ಎಂದ ಮೋದಿ; ಯೋಗಿ ‘ನಿರುಪಯೋಗಿ’ ಎಂದ ಅಖಿಲೇಶ್ ಯಾದವ್!

ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಬಿದ್ದು 2 ವರ್ಷದ ಮಗು ಸಾವು

ಇತ್ತೀಚಿನ ಸುದ್ದಿ