ಗಿಳಿ, ಕೌಜುಗ, ಆಮೆ, ಮೊಲ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್! - Mahanayaka

ಗಿಳಿ, ಕೌಜುಗ, ಆಮೆ, ಮೊಲ ಮಾರಾಟ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್!

birds
13/01/2022


Provided by

ಕಲಬುರಗಿ: ಗಿಳಿ, ಕೌಜುಗ, ಆಮೆ, ಮೊಲಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿ ಹಕ್ಕಿಗಳಿದ್ದ ಗೂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇತಿಯಾತ್ ಕಾಲೊನಿ ನಿವಾಸಿ 50 ವರ್ಷ ವಯಸ್ಸಿನ ಹಾಜಿಖಾನ್ ಖಾಸಿಂಖಾನ್ ಪಠಾಣ್ ಬಂಧಿತ ಆರೋಪಿಯಾಗಿದ್ದು, ಈತ ನಗರದ ಸೂಪರ್ ಮಾರ್ಕೆಟ್‌ನ ಸಂಗಮ ಚಿತ್ರಮಂದಿರದ ಬಳಿ ಅಕ್ರಮವಾಗಿ ಗಿಳಿ, ಕೌಜುಗ, ಆಮೆ, ಮೊಲಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಹುಣಚಿರಾಯ (ಕೇಶವ) ಮೋಟಗಿ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಮಾಹಿತಿ ಪಡೆದ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಗೂಡುಗಳಲ್ಲಿದ್ದ ಪಕ್ಷಿ, ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವೇಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಚವ್ಹಾಣ್, ಹುಣಚಿರಾಯ ಮೋಟಗಿ ಹಾಗೂ ಸಿಬ್ಬಂದಿ ಇದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಳ್ಳನನ್ನು 1 ಕಿ.ಮೀ. ದೂರ ಬೆನ್ನಟ್ಟಿ ಹಿಡಿದ ಪೊಲೀಸ್ | ವಿಡಿಯೋ ವೈರಲ್

ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ!

ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ವಿಧಿಸಿ ಆದೇಶ

ಉದ್ಘಾಟನೆಗೊಂಡು ಒಂದೇ ದಿನದಲ್ಲಿ ಬಾಗಿಲು ಮುಚ್ಚಿದ ಆಸ್ಪತ್ರೆ!

ಕೋತಿಯ ಅಂತ್ಯಸಂಸ್ಕಾರ ಮಾಡಿ, ತಿಥಿ ಊಟ ಬಡಿಸಿದ್ದಕ್ಕೆ ಜನರ ಮೇಲೆ ಕೇಸ್!

 

ಇತ್ತೀಚಿನ ಸುದ್ದಿ