ಉಕ್ರೇನ್‌ನಲ್ಲಿ ಅಮೇರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಕೊಲೆ - Mahanayaka

ಉಕ್ರೇನ್‌ನಲ್ಲಿ ಅಮೇರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಕೊಲೆ

15/03/2022

ಉಕ್ರೇನ್​: ಉಕ್ರೇನ್​ನ ರಾಜಧಾನಿ ಕೀವ್​ ಹೊರವಲಯದ ಇರ್ಪಿನ್​ ಎಂಬಲ್ಲಿ ಅಮೇರಿಕದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬ್ರೆಂಟ್‌ ರೆನೌಡ್‌ ಅವರನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ ಎಂದು ಕೀವ್ ಪೊಲೀಸರು ತಿಳಿಸಿದ್ದಾರೆ.


Provided by

ವಿಡಿಯೋ ವರದಿಗಾರರಾಗಿದ್ದ ಬ್ರೆಂಟ್‌ ರೆನೌಡ್‌ ಮಾನವೀಯ ಕಥೆಗಳ ನಿರ್ಮಾಣದ ಮೂಲಕ ಹೆಸರು ಮಾಡಿದ್ದರು. ಅವರು ಹತ್ಯೆಗೀಡಾದ ಸ್ಥಳದಲ್ಲಿ ‘ದಿ ನ್ಯೂಯಾರ್ಕ್‌ ಟೈಮ್ಸ್‌’ನ ಗುರುತಿನ ಚೀಟಿ ಮತ್ತು ಅಮೆರಿಕದ ಪಾಸ್​ಪೋರ್ಟ್​​ ದೊರೆತಿದೆ. ಆದರೆ, ಪ್ರಸ್ತುತ ಅವರು ದಿ ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.

ಕೊಲೆಯಾದ ಬ್ರೆಂಟ್‌ ರೆನೌಡ್‌ ‘ಪೀಬಾಡಿ ಮತ್ತು ಡುಪಾಂಟ್’ ಪ್ರಶಸ್ತಿ ವಿಜೇತರಾಗಿದ್ದರು. ಇವರು ಕೊಲೆಯಾದ ಸ್ಥಳದಲ್ಲಿ ಇತರೆ ಪತ್ರಕರ್ತರು ಸಹ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಹೋಗುವಾಗ ಈ ಗುಂಡಿನ ದಾಳಿ ಮಾಡಲಾಗಿದೆ ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ