ಹಜ್ ಯಾತ್ರೆಯಲ್ಲಿ 900ಕ್ಕಿಂತಲೂ ಅಧಿಕ ಮಂದಿ ಸಾವು: 52 ಡಿಗ್ರಿ ಸೆಲ್ಸಿಯಸ್ ಗೇರಿದ ತಾಪಮಾನ

ಈ ಬಾರಿಯ ಹಜ್ ಯಾತ್ರೆಯಲ್ಲಿ ಭಾರೀ ಸಾವು ನೋವಾಗಿದ್ದು 900ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. 52 ಡಿಗ್ರಿ ಸೆಲ್ಸಿಯಸ್ ನಷ್ಟು ಭಾರಿ ತಾಪಮಾನದ ಕಾರಣ ಹಜ್ ಯಾತ್ರಾರ್ಥಿಗಳು ತೀವ್ರ ಬಳಲಿದ್ದಾರೆ ಮತ್ತು ಸಾವು ನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಈ ಬಾರಿ ಸೌದಿಯಲ್ಲಿ ಬಿಸಿಲಿನ ತಾಪ ಭಾರಿ ಜೋರಾಗಿತ್ತು. ಇದು ಹಜ್ ನಿರ್ವಹಿಸಲು ಬಂದಿರುವ ವೃದ್ಧರು ಮತ್ತು ರೋಗಿಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಕೇವಲ ಈಜಿಫ್ಟ್ ಒಂದರಿಂದಲೇ 60ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಕಾಣೆಯಾದವರ ಪಟ್ಟಿಯನ್ನು ನೋಡಿದರೆ ಸಾವಿನ ಸಂಖ್ಯೆ ಇನ್ನೂ ಅಧಿಕವಾಗಬಹುದು ಎಂದು ಹೇಳಲಾಗುತ್ತಿದೆ. ಕಳೆದ ವರ್ಷ 200 ಕ್ಕಿಂತಲೂ ಅಧಿಕ ಮಂದಿ ಸಾವಿಗೀಡಾಗಿದ್ದರು. ಇವರಲ್ಲಿ ಹೆಚ್ಚಿನವರು ಇಂಡೋನೇಷ್ಯಾದವರಾಗಿದ್ದರು.
ಈ ಬಾರಿ ಸುಮಾರು 70ರಷ್ಟು ಭಾರತೀಯರು ಸಾವಿಗಿಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth