ಜಗದೀಶ್ ಶೆಟ್ಟರ್ ಗೆ ಅಮಿತ್ ಶಾ ಕರೆ ಮಾಡಿದ್ರಾ?: ಪಕ್ಷ ಬಿಟ್ಟವರನ್ನ ವಾಪಸ್ ಕರೆ ತರೋ ಪ್ರಯತ್ನಕ್ಕೆ ಮುಂದಾದ ಬಿಜೆಪಿ!

ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ಲಿಂಗಾಯತ ಮತಗಳನ್ನ ಸೆಳೆಯಲು ಬಿಜೆಪಿ ಪ್ಲ್ಯಾನ್ ರೂಪಿಸಿದ್ದು, ಬಿಜೆಪಿ ಜೊತೆಗೆ ಮುನಿಸಿಕೊಂಡು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಅವರನ್ನ ಮತ್ತೆ ಬಿಜೆಪಿ ಕರೆತರಲು ಯೋಜನೆ ರೂಪಿಸಿದೆ ಎನ್ನಲಾಗಿದೆ.
ಈ ನಡುವೆ ಜಗದೀಶ್ ಶೆಟ್ಟರ್ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ ಎನ್ನಲಾಗ್ತಿದೆ. ವರದಿಗಳ ಪ್ರಕಾರ ಆಗಸ್ಟ್ 25ರ ಸಂಜೆ ವೇಳೆ ಕರೆ ಮಾಡಿರೋ ಅಮಿತ್ ಶಾ 10 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆನ್ನಲಾಗಿದೆ.
ಶೆಟ್ಟರ್ ಅವರ ಮನವೊಲಿಕೆಯ ಹಿನ್ನೆಲೆಯಲ್ಲಿ ಶಾ ಕರೆ ಮಾಡಿದ್ದಾರೆನ್ನಲಾಗಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ಲೋಕ ಸಭಾ ಚುನಾವಣೆ ಬರಲಿದ್ದು, ಬಿಜೆಪಿ ಬಿಟ್ಟು ಹೋದವರನ್ನ ವಾಪಸ್ ಕರೆತರುವಂತೆ ರಾಜ್ಯ ನಾಯಕರಿಗೆ ಕೂಡ ಕರೆ ಹೋಗಿದೆ. ಚಿಕ್ಕಮಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಿಜೆಪಿ ಬಿಟ್ಟು ಹೋದವರನ್ನು ಪಕ್ಷಕ್ಕೆ ವಾಪಸ್ ಬರುವಂತೆ ಮನವಿ ಮಾಡಿಕೊಂಡ ಬಳಿಕ ಇದೀಗ ರಾಜ್ಯದಲ್ಲಿ ಹೊಸ ಬೆಳವಣಿಗೆ ಆರಂಭಗೊಂಡಿದೆ.
ಯಾರೇ ಪಕ್ಷ ಬಿಟ್ಟರೂ ಮೋದಿಗಾಗಿ ಮತ್ತೆ ಪಕ್ಷಕ್ಕೆ ಬರಬೇಕು ಅಂತ ಬಿಜೆಪಿ ನಾಯಕರು ಪಕ್ಷ ಬಿಟ್ಟ ನಾಯಕರ ಮನವೊಲಿಕೆಗೆ ಮುಂದಾಗಿದ್ದಾರೆ. ಆದ್ರೆ… ಈವರೆಗೆ ನಡೆದ ತಂತ್ರಗಳು ಮುಂದೆಯೂ ನಡೆಯುತ್ತವೆಯೇ ಅನ್ನೋದನ್ನ ಕಾದು ನೋಡಬೇಕಿದೆ. ಚುನಾವಣೆ ಬಂದಾಗ ಮಾತ್ರವೇ ನಮ್ಮ ಬಳಿಗೆ ಬರುತ್ತಾರೆ, ಆ ನಂತರ ನಮ್ಮನ್ನ ಮರೆತು ಬಿಡ್ತಾರೆ ಎನ್ನುವುದು ಬಿಜೆಪಿಯ ಹಿರಿಯ ನಾಯಕರ ಮನಸ್ಸಿನಲ್ಲಿ ಗಟ್ಟಿಯಾಗುತ್ತಿದೆ.