ಒಂದು ಅಪಘಾತ ಜೀವನವನ್ನೇ ನಾಶ ಮಾಡಿತು:  ಮುಖ್ಯ ಪೊಲೀಸ್ ಪೇದೆಯಿಂದ ದುಡುಕಿನ ನಿರ್ಧಾರ! - Mahanayaka
10:27 PM Tuesday 16 - September 2025

ಒಂದು ಅಪಘಾತ ಜೀವನವನ್ನೇ ನಾಶ ಮಾಡಿತು:  ಮುಖ್ಯ ಪೊಲೀಸ್ ಪೇದೆಯಿಂದ ದುಡುಕಿನ ನಿರ್ಧಾರ!

kantraj
18/07/2025

ಚಿಕ್ಕಮಗಳೂರು : ಮುಖ್ಯ ಪೊಲೀಸ್ ಪೇದೆಯೊಬ್ಬರು ಪೊಲೀಸ್ ಕ್ವಾಟ್ರಸ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಪೊಲೀಸ್ ಕ್ವಾಟ್ರಸ್ ನಲ್ಲಿ ನಡೆದಿದೆ.


Provided by

ಮೃತನನ್ನ 45 ವರ್ಷದ ಕಾಂತರಾಜ್ ಎಂದು ಗುರುತಿಸಲಾಗಿದೆ. ಮೃತ ಕಾಂತರಾಜ್ ಗೆ ಕಳೆದ ನಾಲ್ಕೈದು ವರ್ಷಗಳ ಹಿಂದೆ ಅಪಘಾತ ಸಂಭವಿಸಿತ್ತು. ಆಗ ತನ್ನ ಬಲಗಾಲನ್ನ ಕಳೆದುಕೊಂಡಿದ್ದರು. ಅಪಘಾತದ ಬಳಿಕ ಕೃತಕ ಕಾಲು ಜೋಡಿಸಿಕೊಂಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  ಅಪಘಾತ ಸಂಭವಿಸಿದ ಬಳಿಕ ಕಾಂತರಾಜ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕಾಂತರಾಜ್ ರನ್ನ ಹತ್ತಿರದಿಂದ ಕಂಡವರು ಹೇಳುತ್ತಿದ್ದಾರೆ. ಅವರ ಪತ್ನಿ ಊರಿಗೆ ಹೋಗಿದ್ದ ವೇಳೆ ನೇಣು ಬಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಎರಡು ದಿನಗಳ ಹಿಂದೆ ಅವರು ಕೂಡ ಊರಿಗೆ ಹೋಗಿದ್ದರು. ಊರಿನಿಂದ ವಾಪಸ್ ಬಂದ ಬಳಿಕ ಇಂದು ಬೆಳಗ್ಗೆಯಿಂದಲೂ ಮನೆಯವರ ಫೋನ್ ಪಿಕ್ ಮಾಡುತ್ತಿರಲಿಲ್ಲ. ಕುಟುಂಬಸ್ಥರು ಸ್ನೇಹಿತರಿಗೆ ಕರೆ ಮಾಡಿ ಫೋನ್ ಎತ್ತುತ್ತಿಲ್ಲ ಎಂದು ವಿಷಯ ತಿಳಿಸಿದ್ದರು. ಸ್ನೇಹಿತರು ಕ್ವಾರ್ಟರ್ಸ್ ಬಳಿ ಬಂದು ನೋಡಿದಾಗ ಕಾಂತರಾಜ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಕಾಂತರಾಜ್ ಈ ಹಿಂದೆ ಎ.ಎನ್.ಎಫ್. ಹಾಗೂ ಕಳಸ ಠಾಣೆಯಲ್ಲಿ ಕೆಲಸ ಮಾಡಿದ್ದರು. ಯಾವುದಕ್ಕೂ ಹೆದರುತ್ತಿರಲಿಲ್ಲ. ಡೇರಿಂಗ್ ಪೊಲೀಸ್ ಎಂದು ಆತನ ಸ್ನೇಹಿತರು ಕಣ್ಣೀರಿಟ್ಟಿದ್ದಾರೆ.  ಆದರೆ, ಡೇರೆಂಗ್ ಪೊಲೀಸ್ ಕಾಂತರಾಜ್ ಅಪಘಾತದ ಬಳಿಕ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಸ್ಥಳಕ್ಕೆ ಎಸ್ಪಿ ಹಾಗೂ ಎಎಸ್ಪಿ ಭೇಟಿ ನೀಡಿದ್ದಾರೆ. ನಗರ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ