ನಾಲ್ವರ ಜೀವ ಉಳಿಸಿದ ವಿದ್ಯುತ್ ತಂತಿ ಬೇಲಿ!

ಚಿಕ್ಕಮಗಳೂರು(Chikkamagaluru ): ಮಲೆನಾಡಲ್ಲಿ ಗಾಳಿ—ಮಳೆ ಮುಂದುವರಿದಿದೆ. ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಫಿ ತೋಟಕ್ಕಿಳಿದ ಘಟನೆ ಮೂಡಿಗೆರೆ(Mudigere) ತಾಲೂಕಿನ ಅಬ್ಬುಗೂಡಿಗೆ ಬಳಿ ನಡೆದಿದೆ.
ಅಪಘಾತದ ವೇಳೆ ತೋಟಕ್ಕೆ ಹಾಕಿದ್ದ ವಿದ್ಯುತ್ ತಂತಿ ಬೇಲಿಯಲ್ಲಿ ಕಾರು ಸಿಕ್ಕಿ ಹಾಕಿಕೊಂಡ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರ ಜೀವ ಉಳಿದಿದೆ.
ಕಾರಿನಲ್ಲಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದರು. ಅಬ್ಬುಗೂಡಿಗೆ ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಸುಮಾರು 10 ಅಡಿ ಆಳದಲ್ಲಿರುವ ಕಾಫಿ ತೋಟದತ್ತ ನುಗ್ಗಿದೆ. ೀ ವೇಳೆ ವಿದ್ಯುತ್ ತಂತಿ ಬೇಲಿಯಲ್ಲಿ ಕಾರು ಸಿಕ್ಕಿ ಹಾಕಿಕೊಂಡಿದ್ದರಿಂದ ಕೆಳಗೆ ಬೀಳದೇ ಕಾರು ಸುರಕ್ಷಿತವಾಗಿ ನಿಂತಿದೆ.
ಘಟನೆ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD