ಬಸ್ ಗೆ ಅಡ್ಡ ನಿಂತು ಕಬ್ಬು ಹುಡುಕಾಡಿದ ಕಾಡನೆ

ಚಾಮರಾಜನಗರ: ಕಬ್ಬು ತುಂಬಿದ ಲಾರಿ ಎಂದು ಬಸ್ಸೊಂದಕ್ಕೆ ಕಾಡಾನೆ ಅಡ್ಡ ಹಾಕಿ ಎಲ್ಲರನ್ನೂ ಪೇಚಿಗೆ ಸಿಲುಕಿಸಿದ ಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅಸನೂರು ಸಮೀಪ ನಡೆದಿದೆ.
ಸತ್ಯಮಂಗಲದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ನ್ನು ಅಡ್ಡಹಾಕಿದ ಕಾಡಾನೆ ಸೊಂಡಿಲಿನಲ್ಲಿ ಎಲ್ಲಾ ತಡಕಾಡಿದೆ. ಇದು ಕಬ್ಬು ತುಂಬಿದ ಲಾರಿಯಲ್ಲ ಎಂದು ತಿಳಿದ ಬಳಿಕ ಬಸ್ ಬಿಟ್ಟು ತೆರಳಿದೆ. ಆನೆ ಅಡ್ಡ ಹಾಕಿ ದಾರಿ ಬಿಡುತ್ತಿದ್ದಂತೆ ಆತಂಕಕ್ಕೀಡಾಗಿದ್ದ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಗೆ ಅಡ್ಡ ಹಾಕಿ ಕಬ್ಬು ವಸೂಲಿ ಮಾಡುವುದು ಸಾಮಾನ್ಯವಾಗಿದ್ದು ಕಬ್ಬಿನ ಜಿಲ್ಲೆಗಳನ್ನು ಕಾಡಾನೆಗಳಿಗೆ ಲಾರಿ ಚಾಲಕರು ಎಸೆದು ಅಭ್ಯಾಸ ಮಾಡಿರುವುದರಿಂದ ಆನೆಗಳು ವಾಹನಗಳನ್ನು ಅಡ್ಡಹಾಕುವ ಚಾಳಿ ರೂಢಿಸಿಕೊಂಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw