ಸ್ನೇಹಿತನ ಹುಚ್ಚಾಟಕ್ಕೆ ಅಮಾಯಕ ಬಲಿ: ಖಾಸಗಿ ಅಂಗಕ್ಕೆ ಏರ್ ಪ್ರೆಷರ್ ಬಿಟ್ಟ ಪಾಪಿ! - Mahanayaka

ಸ್ನೇಹಿತನ ಹುಚ್ಚಾಟಕ್ಕೆ ಅಮಾಯಕ ಬಲಿ: ಖಾಸಗಿ ಅಂಗಕ್ಕೆ ಏರ್ ಪ್ರೆಷರ್ ಬಿಟ್ಟ ಪಾಪಿ!

banglore 1
28/03/2024


Provided by

ಬೆಂಗಳೂರು: ಸ್ನೇಹಿತನ ಹುಚ್ಚಾಟಕ್ಕೆ ಯುವಕನೋರ್ವ ಬಲಿಯಾಗಿದ ಅಮಾನವೀಯ ಘಟನೆ ಥಣಿಸಂದ್ರ ಬಳಿ ನಡೆದಿದ್ದು, ಈ ಘಟನೆ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಯೋಗೀಶ್(24) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಮುರಳಿ ಎಂಬಾತ ತನ್ನ ಹುಚ್ಚಾಟಕ್ಕೆ ಸ್ನೇಹಿತನನ್ನೇ ಬಲಿ ನೀಡಿದ ವ್ಯಕ್ತಿಯಾಗಿದ್ದಾನೆ.

ಅಕ್ಕನ ಮದುವೆಯ ಸಿದ್ಧತೆಯಲ್ಲಿದ್ದ ಯೋಗೀಶ್ ಬೈಕ್ ಸರ್ವೀಸ್ ಮಾಡಲು ಸ್ನೇಹಿತನ ಬಳಿ ಹೋಗಿದ್ದ. ವೇಳೆ ಸ್ನೇಹಿತ ಮುರಳಿ ಬೈಕ್ ಸರ್ವೀಸ್ ಮಾಡಿ ಡ್ರೈ ಮಾಡಲು ಮುಂದಾಗಿದ್ದು, ಈ ವೇಳೆ ಯೋಗೇಶ್ ನ ಮುಖಕ್ಕೆ ಏರ್ ಪ್ರೆಷರ್ ಗನ್ ಹಿಡಿದಿದ್ದಾನೆ. ಈ ವೇಳೆ ಇದನ್ನು ತಪ್ಪಿಸಲು ಬಾಗಿದ್ದ ಯೋಗೇಶ್ ನ ಖಾಸಗಿ ಭಾಗಕ್ಕೆ ಏರ್ ಬಿಟ್ಟಿದ್ದಾನೆ.

ಇದರ ಪರಿಣಾಮ ಅತ್ಯಂತ ದುರಂತವಾಗಿತ್ತು. ಏರ್ ಪ್ರೆಷರ್ ಗಾಳಿ ಯೋಗೇಶ್ ನ ಹೊಟ್ಟೆಗೆ ನುಗ್ಗಿದ್ದು, ಗಾಳಿಯ ಒತ್ತಡಕ್ಕೆ ಒಳ ಅಂಗಾಂಗಗಳು ಒಡೆದು ಹೋಗಿವೆ. ಪರಿಣಾಮವಾಗಿ ರಕ್ತಸ್ರಾವವಾಗಿ ಯೋಗೇಶ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಆತನನ್ನು ಸ್ನೇಹಿತರೆಲ್ಲ ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಯೋಗೇಶ್ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದುಷ್ಕೃತ್ಯ ಎಸಗಿದ ಆರೋಪಿ ಮುರಳಿಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ