ಆಂಟಿಲಿಯಾದಲ್ಲಿ ಅನಂತ್- ರಾಧಿಕಾ ಹಳದಿ ಶಾಸ್ತ್ರ; ಸಂಭ್ರಮದಲ್ಲಿ ಪಾಲ್ಗೊಂಡ ಸೆಲಿಬ್ರಿಟಿಗಳು, ಸ್ಟಾರ್ ನಟ-ನಟಿಯರು - Mahanayaka
3:37 AM Wednesday 15 - October 2025

ಆಂಟಿಲಿಯಾದಲ್ಲಿ ಅನಂತ್– ರಾಧಿಕಾ ಹಳದಿ ಶಾಸ್ತ್ರ; ಸಂಭ್ರಮದಲ್ಲಿ ಪಾಲ್ಗೊಂಡ ಸೆಲಿಬ್ರಿಟಿಗಳು, ಸ್ಟಾರ್ ನಟ–ನಟಿಯರು

ananth radhika
10/07/2024

ಮುಂಬೈ: ಮದುವೆ ಅಂದರೆ ಶಾಸ್ತ್ರ, ಸಂಪ್ರದಾಯ ಹಾಗೂ ಜೊತೆಜೊತೆಗೆ ಆಯಾ ಟ್ರೆಂಡ್ ಗೆ ತಕ್ಕ ಹಾಗೆ ಸಂಭ್ರಮ, ಸಂತೋಷ ಇತ್ಯಾದಿ ಇತ್ಯಾದಿ. ಭಾರತದ ಟಾಪ್ ಕಂಪನಿಯ ಒಡೆಯ ಎನಿಸಿಕೊಂಡಿರುವ ಮುಕೇಶ್ ಅಂಬಾನಿ- ನೀತಾ ಅಂಬಾನಿ ದಂಪತಿಯ ಕಿರಿ ಮಗ ಅನಂತ್- ರಾಧಿಕಾ ಮದುವೆಗೆ ಮುಂಚಿನ ಶಾಸ್ತ್ರ- ಸಂಪ್ರದಾಯದ ಆಚರಣೆಗಳು ನಿತ್ಯವೂ ಸೋಷಿಯಲ್ ಮೀಡಿಯಾ, ಮೈಕ್ರೋಬ್ಲಾಗಿಂಗ್ ಸೈಟ್ ಗಳಲ್ಲಿ ವೈರಲ್ ಆಗುತ್ತಿವೆ. ಜುಲೈ ಹನ್ನೆರಡನೇ ತಾರೀಕು ಮದುವೆ. ಅದಕ್ಕೂ ಮುಂಚೆ ಹಾಗೂ ನಂತರದಲ್ಲಿ ಹಲವು ಕಾರ್ಯಕ್ರಮಗಳ ವೇಳಾಪಟ್ಟಿ ಸಿದ್ಧವಾಗಿದ್ದು, ಇದೀಗ ಮುಂಬೈನಲ್ಲಿ ನಡೆದ ಅರಿಶಿಣದ ಶಾಸ್ತ್ರ (ಉತ್ತರ ಭಾರತದಲ್ಲಿ ಹಳದಿ ಕಾರ್ಯಕ್ರಮ ಅಂತಾರೆ) ಸಾಂಪ್ರದಾಯಿಕವಾಗಿಯೂ ಅದೇ ವೇಳೆ ಅದ್ಧೂರಿಯಾಗಿಯೂ ಮುಗಿದಿದೆ. ಅದಕ್ಕೂ ಮುಂಚೆ ಸಂಗೀತ್ ಕಾರ್ಯಕ್ರಮ, ವರನ ತಾಯಿ ಮನೆಯ ತವರಿನವರಿಂದ ನಡೆಯುವ ಕಾರ್ಯಕ್ರಮ ಹಾಗೂ ಆರಂಭದಲ್ಲಿ ಸಾಮೂಹಿಕ ವಿವಾಹ ಸಮಾರಂಭ, ದಾನ- ಧರ್ಮ ಇತ್ಯಾದಿಗಳು ನಡೆದವು.


Provided by

ಅರಿಶಿಣದ ಶಾಸ್ತ್ರ ನಡೆದದ್ದು ಮುಂಬೈ ಅಷ್ಟೇ ಅಲ್ಲ, ಜಗತ್ತಿನಲ್ಲಿಯೇ ಹೆಸರಾದ ಆಂಟಿಲಿಯಾ ಮನೆಯಲ್ಲಿ. ಸಲ್ಮಾನ್ ಖಾನ್, ರಣವೀರ್ ಸಿಂಗ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಜಾನ್ಹವಿ ಕಪೂರ್ ಸೇರಿದಂತೆ ಬಾಲಿವುಡ್ ನ ತಾರಾ ಬಳಗವೇ ಈ ಕಾರ್ಯಕ್ರಮದಲ್ಲಿ ಭಾಗೀ ಆಗಿತ್ತು. ಇದರಲ್ಲಿ ಸ್ಟಾರ್ ಗಳ ಹೆಸರು ಅನ್ನೋದಕ್ಕಿಂತ ಆಂಟಿಲಿಯಾದಲ್ಲಿ ನಕ್ಷತ್ರಗಳ ಗ್ಯಾಲಕ್ಸಿಯೇ ಸೇರಿತ್ತು. ಸಾಂಪ್ರದಾಯಿಕ ಕಾರ್ಯಕ್ರಮವಾದ್ದರಿಂದ ಅನಿಲ್ ಅಂಬಾನಿ ಹಾಗೂ ಅವರ ಪತ್ನಿ ಟೀನಾ ಅವರ ಸಹ ಇದ್ದರು. ಉದ್ಧವ್ ಠಾಕ್ರೆ, ಅವರ ಪತ್ನಿ ರಶ್ಮಿ, ಮಗ ಆದಿತ್ಯ ಸಹ ಬಂದಿದ್ದರು.

ಅಂದ ಹಾಗೆ ಈ ಹಳದಿ ಶಾಸ್ತ್ರಕ್ಕೂ ಮುಂಚೆ, ಒಂದು ದಿನಕ್ಕೆ ಮೊದಲು ರಾಧಿಕಾ ಅವರ ತಂದೆ ವಿರೇನ್ ಮರ್ಚೆಂಟ್ ಹಾಗೂ ತಾಯಿ ಶೈಲಾ ಅವರು ಮುಂಬೈನ ಟ್ರೈಡೆಂಟ್ ಹೋಟೆಲ್ ನಲ್ಲಿ ಗ್ರಹ ಶಾಂತಿ ಪೂಜೆಯನ್ನು ಇರಿಸಿಕೊಂಡಿದ್ದರು.

ಇನ್ನು ಸಂಗೀತ್ ಕಾರ್ಯಕ್ರಮದ ವಿಶೇಷ ಏನಾಗಿತ್ತು ಅಂದರೆ, ಪಾಪ್ ಐಕಾನ್ ಅನಿಸಿಕೊಂಡಿರುವ ಜಸ್ಟಿನ್ ಬೀಬರ್ ಇದರಲ್ಲಿ ಹಾಡಿದರು.

ಜುಲೈ ಹನ್ನೆರಡನೇ ತಾರೀಕು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ಇರುವ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ಅನಂತ್— ರಾಧಿಕಾ ಮದುವೆ ಕಾರ್ಯಕ್ರಮ ಇದೆ. ಹದಿಮೂರಕ್ಕೆ ಶುಭ ಆಶೀರ್ವಾದ ಹಾಗೂ ಹದಿನಾಲ್ಕನೇ ತಾರೀಕು ಮಂಗಳ ಉತ್ಸವ ನಿಗದಿ ಆಗಿದೆ.

ಅಂಬಾನಿ ಕುಟುಂಬದಲ್ಲಿ ಹಿಂದೂ ಧಾರ್ಮಿಕ ಸಂಪ್ರದಾಯಗಳ ಆಚರಣೆಗೆ ಮಹತ್ವ ನೀಡಲಾಗುತ್ತದೆ. ದಾನ, ಪೂಜೆ, ದೇವತಾ ಆರಾಧನೆ ಇವೆಲ್ಲವನ್ನೂ ತುಂಬ ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ. ಇದರ ಜತೆಗೆ ಜಗತ್ತಿನ ನಾನಾ ಭಾಗದಲ್ಲಿನ, ನಾನಾ ಕ್ಷೇತ್ರಗಳಲ್ಲಿ ಸ್ಟಾರ್ ಗಳು, ಸೆಲೆಬ್ರಿಟಿಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ