ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ - Mahanayaka
12:22 AM Wednesday 15 - October 2025

ಅನಾಥ ಹುಡುಗಿಯನ್ನು ಮಗಳಂತೆ ಸಾಕಿ, ಹಿಂದೂ ಸಂಪ್ರದಾಯದಂತೆ ಮದುವೆ ಮಾಡಿಸಿಕೊಟ್ಟ ಮುಸ್ಲಿಮ್ ಕುಟುಂಬ

pooja odageri
01/08/2021

ವಿಜಯಪುರ:  ತಂದೆ, ತಾಯಿ ಹಾಗೂ ಅಜ್ಜಿಯನ್ನು ಕಳೆದುಕೊಂಡಿದ್ದ ಹಿಂದೂ ಹುಡುಗಿಯನ್ನು ಸಾಕಿದ ಮುಸ್ಲಿಮ್ ಕುಟುಂಬವೊಂದು, ಇದೀಗ ಆಕೆ ಬೆಳೆದು ಮದುವೆ ವಯಸ್ಸಿಗೆ ಬಂದಾಗ ಹಿಂದೂ ಸಂಪ್ರದಾಯದಂತೆ, ಆಕೆಯ ಸಮುದಾಯದ ಹುಡುಗನ ಜೊತೆಗೆ ವಿವಾಹ ಮಾಡಿಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.


Provided by

ಜಾತಿ, ಧರ್ಮಗಳ ಹೆಸರಿನಲ್ಲಿ ತಿಕ್ಕಾಟ ನಡೆಯುತ್ತಿರುವ ಸಂದರ್ಭದಲ್ಲಿ ಮುಸ್ಲಿಮ್ ಕುಟುಂಬದ ಈ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ. ಹಿಂದೂ ಹುಡುಗಿಯು ತನ್ನ 13ನೇ ವಯಸ್ಸಿನಲ್ಲಿಯೇ ತನ್ನ ತಂದೆ, ತಾಯಿ ಸಹಿತ ಇಡೀ ಕುಟುಂಬಸ್ಥರನ್ನು ಕಳೆದುಕೊಂಡಿ ಅನಾಥಳಾಗಿ ನಿಂತಿದ್ದಳು. ಈ ವೇಳೆ ಬಾಲಕಿಗೆ ಸಾಂತ್ವಾನ ಹೇಳಿದ ನೆರೆಯ ಮೆಹಬೂಬ್ ಮಸಳಿ, ತನ್ನ ಮನೆಗೆ ಕರೆತಂದು ತನ್ನ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಿದ್ದರೋ ಅದೇ ರೀತಿ ಆಕೆಯನ್ನು ನೋಡಿಕೊಂಡಿದ್ದಾರೆ.

ಮೆಹಬೂಬ್ ಅವರಿಗೆ ನಾಲ್ಕು ಮಕ್ಕಳಿದ್ದರು. ಆ ಮಕ್ಕಳ ಜೊತೆಗೆ ಹಿಂದೂ ಕುಟುಂಬದ ಪೂಜಾ ಒಡಗೇರಿ(20) ಕೂಡ ಬೆಳೆದಳು. ಇದೀಗ ಮದುವೆ ಪ್ರಾಯ ಬಂದವೇಳೆ ಮೆಹಬೂನ್ ಮಸಳಿ ಅವರೇ ಮುಂದೆ ನಿಂತು, ಪೂಜಾ ಒಡಗೇರಿಯ ಸಮುದಾಯಕ್ಕೆ ಸೇರಿದ ವರನನ್ನೇ ಹುಡುಕಿ ಮದುವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿದ್ದಾರೆ.

ಇನ್ನಷ್ಟು ಸುದ್ದಿಗಳು…

ಭಗತ್ ಸಿಂಗ್ ನಾಟಕದ ದೃಶ್ಯ ಅಭ್ಯಾಸ ಮಾಡುತ್ತಿದ್ದ ಬಾಲಕ ನೇಣಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು!

ಉನ್ನಾವೋ ಸಂತ್ರಸ್ತೆಯ ಅಪಘಾತ ಪ್ರಕರಣ: ದೂರುದಾರರ ಆಕ್ಷೇಪಣೆ ರೋಮಾಂಚಕ ಕತೆಯಂತಿವೆ | ದೆಹಲಿ ನ್ಯಾಯಾಲಯ

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಭೀಕರವಾಗಿ ಕೊಂದ ಕಾಡು ಪ್ರಾಣಿ!

ಬಿಜೆಪಿಗೆ ಅಧಿಕಾರ ಮಾತ್ರ ಬೇಕು, ಜನರ ಯೋಗ ಕ್ಷೇಮ ಬೇಡ | ಸತೀಶ್ ಜಾರಕಿಹೊಳಿ

ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಉಪವಾಸ ಸತ್ಯಾಗ್ರಹ!

 

ಇತ್ತೀಚಿನ ಸುದ್ದಿ