ವಿಶ್ವದ ಅತೀ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣ: ‘ಸಾಮಾಜಿಕ ನ್ಯಾಯದ ಪ್ರತಿಮೆ’ ಎಂದು ಕರೆದ ಸಿಎಂ ವೈ.ಎಸ್.ಜಗನ್ ಮೋಹನ್

ಹೈದರಾಬಾದ್: ವಿಜಯವಾಡದ ಸ್ವರಾಜ್ ಮೈದಾನದಲ್ಲಿ 125 ಅಡಿ ಎತ್ತರದ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ಅನಾವರಣಗೊಳಿಸಿದರು.
ಪ್ರತಿಮೆಯನ್ನು ಅನಾವರಣಗೊಳಿಸುವ ಮೊದಲು ಸಾಮಾಜಿಕ ಸಮತಾ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಅಮೆರಿಕದ ನ್ಯೂಯಾರ್ಕ್ ಲಿಬರ್ಟಿ ಪ್ರತಿಮೆಗೆ ಹೆಸರುವಾಸಿಯಾಗಿದ್ದರೆ, ಆಂಧ್ರಪ್ರದೇಶದ ವಿಜಯವಾಡ ನಗರವನ್ನು ಮುಂದೆ ‘ಸಾಮಾಜಿಕ ನ್ಯಾಯದ ಪ್ರತಿಮೆ’ ಎಂದು ಕರೆಯಲಾಗುವುದು ಎಂದರು.
ಈ ಪ್ರತಿಮೆಯು ದಲಿತರು ಮತ್ತು ದೇಶದ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ಇತರ ದೀನದಲಿತ ವರ್ಗಗಳ ಆತ್ಮವನ್ನು ಪ್ರತಿಬಿಂಬಿಸುತ್ತದೆ ಎಂದರು.
ಈ ಪ್ರತಿಮೆಯು ಅಸ್ಪೃಶ್ಯತೆ ವಿರುದ್ಧದ ಹೋರಾಟದ ಆಧಾರ ಸ್ತಂಭವಾಗಿದೆ. ನಾವು ಇಂದಿಗೂ ಇತರ ರೂಪಗಳಲ್ಲಿ ಅಸ್ಪೃಶ್ಯತೆ ವಿರುದ್ಧ ಹೋರಾಡುತ್ತಿದ್ದೇವೆ. ಅಂಬೇಡ್ಕರ್ ಅವರು ದಲಿತರು ಮತ್ತು ಸಮಾಜದ ಇತರ ಅಂಚಿನಲ್ಲಿರುವ ವರ್ಗಗಳನ್ನು ತಮ್ಮ ತಾರತಮ್ಯದ ವಿರುದ್ಧ ಹೋರಾಡಲು ಪ್ರೇರೇಪಿಸಿದರು, ಶಿಕ್ಷಣ ಪಡೆಯಲು ಸಾಧ್ಯವಾಗದ ಶೋಷಿತ ವರ್ಗಗಳ ನಡುವೆ ಶಿಕ್ಷಣದ ಕ್ರಾಂತಿಗೆ ಅಂಬೇಡ್ಕರ್ ನಾಂದಿ ಹಾಡಿದ್ದಾರೆ ಎಂದರು.
ದಲಿತರು ಮತ್ತು ಇತರ ಶೋಷಿತ ವರ್ಗಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ರಾಜ್ಯವು ಸರ್ವಪ್ರಯತ್ನಗಳನ್ನು ಮಾಡುತ್ತಿದೆ. ಈ ಪ್ರಯತ್ನವು ಅವರನ್ನು ಆರ್ಥಿಕವಾಗಿ ಸಬಲಗೊಳಿಸುವ ಮೂಲಕ ತಾರತಮ್ಯದ ವಿರುದ್ಧ ಹೋರಾಡಲು ರೂಪುಗೊಳಿಸಲಿದೆ ಎಂದು ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ಅಭಿಪ್ರಾಯಪಟ್ಟರು.