ಅಂಬೇಡ್ಕರ್ ಹೆಸರಿಗೆ ವಿರೋಧ: ಶಾಸಕರ, ಸಚಿವರ ಮನೆಗೆ ಬೆಂಕಿ ಹಚ್ಚಿದ ದೇಶದ್ರೋಹಿಗಳು - Mahanayaka
2:46 PM Thursday 16 - October 2025

ಅಂಬೇಡ್ಕರ್ ಹೆಸರಿಗೆ ವಿರೋಧ: ಶಾಸಕರ, ಸಚಿವರ ಮನೆಗೆ ಬೆಂಕಿ ಹಚ್ಚಿದ ದೇಶದ್ರೋಹಿಗಳು

andhra
25/05/2022

ವಿಶಾಖಪಟ್ಟಣ: ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಬಾರದು ಎಂದು ಜಾತಿ ಪೀಡೆ ದೇಶದ್ರೋಹಿಗಳು ವಿಧ್ವಂಸಕ ಕೃತ್ಯ ಆರಂಭಿಸಿದ್ದು, ಸಚಿವರು ಮತ್ತು ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ.


Provided by

ಅಮಲಾಪುರಂನ ಸಾರಿಗೆ ಸಚಿವ ವಿಶ್ವರೂಪ್‌ ಅವರ ಮನೆಗೆ ಬೆಂಕಿ ಹಚ್ಚಲಾಗಿದ್ದು, ಮನೆಯ ಸಮೀಪ ನಿಲ್ಲಿಸಲಾಗಿದ್ದ ವಾಹನಗಳನ್ನೂ ಧ್ವಂಸ ನಡೆಸಿದ್ದಾರೆ. ಮನೆಯಲ್ಲಿದ್ದ ಪೀಠೋಪಕರಣಗಳನ್ನು ಕೂಡ ಸುಟ್ಟಿದ್ದು, ಇದೊಂದು ಪೂರ್ವ ಯೋಜಿತ ಕೃತ್ಯ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಶಾಸಕ ಪೊನ್ನಾಡ ಸತೀಶ್‌ ಅವರ ಮನೆಗೂ ಬೆಂಕಿ ಹಚ್ಚಲಾಗಿದೆ.

ಕೋನಸೀಮಾ ಜಿಲ್ಲೆಯನ್ನು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲೆ ಎಂದು ಮರುನಾಮಕರಣ ಮಾಡಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿತ್ತು. ಈ ಬಗ್ಗೆ  ಪರ ವಿರೋಧಗಳಿದ್ದರೆ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಭಾರೀ ಸಂಖ್ಯೆಯಲ್ಲಿ ಎಸ್ ಸಿ, ಎಸ್ ಟಿಗಳಿರುವ ಈ ಜಿಲ್ಲೆಯಲ್ಲಿ ಅಂಬೇಡ್ಕರ್ ಹೆಸರಿಗೆ ಭಾರೀ ಬೆಂಬಲ ಕೂಡ ವ್ಯಕ್ತವಾಗಿತ್ತು. ಇದನ್ನು ಸಹಿಸದ ಜಾತಿ ಪೀಡೆಗಳು  ಪೂರ್ವ ಯೋಜಿತವಾಗಿ ಕೃತ್ಯ ನಡೆಸಿದ್ದಾರೆನ್ನಲಾಗಿದೆ.

ಇನ್ನೂ ಈ ಘಟನೆಯನ್ನು ದೇಶದ್ರೋಹ ಎಂದು ಪರಿಗಣಿಸಿ, ಕೃತ್ಯ ಎಸಗಿದವರ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿದೆ. ಅಂಬೇಡ್ಕರ್ ಬರೆದ ಸಂವಿಧಾನದಡಿಯಲ್ಲಿ ಜೀವಿಸುವವರಿಗೆ ಅಂಬೇಡ್ಕರ್ ಹೆಸರೆಂದರೆ ಯಾಕಿಷ್ಟು ಕೋಪ? ಅಷ್ಟು ಕಷ್ಟದಲ್ಲಿ ಭಾರತದಲ್ಲಿ ಇವರ್ಯಾಕೆ ಜೀವಿಸಬೇಕು? ಎಲ್ಲಾದ್ರೂ ದೇಶಾಂತರ ಹೋಗಬಾರದೇ? ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪತ್ನಿಗಾಗಿ 90 ಸಾವಿರ ರೂಪಾಯಿಯ ಮೊಪೆಡ್ ಖರೀದಿಸಿದ ಭಿಕ್ಷುಕ!

1% ಕಮಿಷನ್ ಪಡೆದದ್ದಕ್ಕೆ ಆರೋಗ್ಯ ಸಚಿವನನ್ನು ಕಿತ್ತೆಸೆದು ಅರೆಸ್ಟ್ ಮಾಡಿಸಿದ ಆಮ್ ಆದ್ಮಿ ಪಕ್ಷ

ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಮಗು ಜೀವಂತ!

ಅಪಾಯಕಾರಿ ಕೆಮಿಕಲ್ ಸೋರಿಕೆ: ಹಲವರು ಆಸ್ಪತ್ರೆ ಗೆ ದಾಖಲು

ವಿಸ್ಮಯ ಪ್ರಕರಣ: ಕಿರಣ್ ಕುಮಾರ್ ಗೆ 10 ವರ್ಷ ಜೈಲು | 12 ಲಕ್ಷ ದಂಡ

ಇತ್ತೀಚಿನ ಸುದ್ದಿ