ಗಾಂಜಾ ವ್ಯಸನಿ ಮಗನ ಕಾಟ ತಾಳಲಾರದೆ ಕೊಂದು ಹಾಕಿದ ತಾಯಿ - Mahanayaka
10:01 AM Wednesday 10 - December 2025

ಗಾಂಜಾ ವ್ಯಸನಿ ಮಗನ ಕಾಟ ತಾಳಲಾರದೆ ಕೊಂದು ಹಾಕಿದ ತಾಯಿ

08/02/2021

ಆಂಧ್ರಪ್ರದೇಶ:  ಗಾಂಜಾ ವ್ಯಸನಿಯಾಗಿದ್ದ ತನ್ನ 17 ವರ್ಷದ ಮಗನನ್ನು ಸ್ವಂತ ತಾಯಿಯೇ ಹತ್ಯೆ ಮಾಡಿರುವ ಘಟನೆ  ಆಂಧ್ರಪ್ರದೇಶದ ಗುಂಟೂರಿನಲ್ಲಿ ಶನಿವಾರ ನಡೆದಿದೆ.

ಗುತ್ತಿಗೆ ಸ್ವಚ್ಛತಾ ಕಾರ್ಮಿಕ ಆಗಿರುವ 43 ವರ್ಷದ ಸುಮಲತಾ ಅವರು ತಮ್ಮ 17 ವರ್ಷದ ಸಿದ್ಧಾರ್ಥ್ ನನ್ನು ಹತ್ಯೆ ಮಾಡಿದ್ದಾರೆ. ಪ್ರತೀ ದಿನ ಮಗನ ಕಿರುಕುಳದಿಂದ ಸಹಿಸಲು ಸಾಧ್ಯವಾಗದೇ ಈ ಕೃತ್ಯ ನಡೆಸಿರುವುದಾಗಿ ತಾಯಿ ಸುಮಲತಾ ಹೇಳಿದ್ದಾರೆ.

ಪತಿ ಮೃತಪಟ್ಟ ಬಳಿಕ ಸುಮಲತಾ ಅವರು ತಮ್ಮ ಮಗ ಸಿದ್ಧಾರ್ಥನ ಜೊತೆಗೆ ಅಗ್ರಹಾರಂ ಎಂಬಲ್ಲಿ ವಾಸಿಸುತ್ತಿದ್ದರು. ತಾಯಿ ಕಷ್ಟಪಟ್ಟು ತನ್ನನ್ನು ಸಾಕುತ್ತಿದ್ದಾರೆ ಎನ್ನುವುದನ್ನೂ ನೋಡದ ಸಿದ್ಧಾರ್ಥ್ ಕೆಟ್ಟದಾರಿ ಹಿಡಿದಿದ್ದ.

ಗಾಂಜಾದ ದಾಸನಾಗಿದ್ದ ಸಿದ್ಧಾರ್ಥ್ ಪ್ರತೀ ದಿನ ಗಾಂಜಾ ಸೇದಲು ಹಣ ನೀಡುವಂತೆ ತಾಯಿಯನ್ನು ಪೀಡಿಸುತ್ತಿದ್ದ. ಶಾಲೆಯನ್ನು ಕೂಡ ಅರ್ಧದಲ್ಲಿಯೇ ಬಿಟ್ಟಿದ್ದ. ಮಗನ ಟಾರ್ಚರ್ ಸಹಿಸಿ ಸಾಕಾಗಿದ್ದ ಸುಮಲತಾ. ಘಟನೆ ನಡೆದ ದಿನ ಮನೆಯಿಂದ ಹೊರ ಬಂದು, ಅವನ ಕಾಟದಿಂದ ನಾನು ಪಾರಾದೆ ಎಂದು ಹೇಳಿ ಹೋಗಿದ್ದಾರೆ.

ಸುಮಲತಾ ಅವರ ಮಾತು ಕೇಳಿ  ಅನುಮಾನಗೊಂಡ ಸ್ಥಳೀಯರು ಮನೆಯೊಳಗೆ ಹೋಗಿ ನೋಡಿದ ವೇಳೆ ಸಿದ್ಧಾರ್ಥ ಶವವಾಗಿ ಮಲಗಿದ್ದಾನೆ. ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಾಯಿ ಸುಮಲತಾ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ