ದೈವದ ವೇಷ ಧರಿಸಿ ಕಾಂತಾರ ಚಿತ್ರದ ಡೈಲಾಗ್ ಹೊಡೆದ ತಹಶೀಲ್ದಾರ್! - Mahanayaka
5:52 PM Sunday 14 - September 2025

ದೈವದ ವೇಷ ಧರಿಸಿ ಕಾಂತಾರ ಚಿತ್ರದ ಡೈಲಾಗ್ ಹೊಡೆದ ತಹಶೀಲ್ದಾರ್!

andra kanthara
15/11/2022

ಆಂಧ್ರಪ್ರದೇಶ: ಕಾಂತಾರ ಚಿತ್ರದಿಂದ ಪ್ರೇರಣೆ ಪಡೆದ ತಹಶೀಲ್ದಾರ್ ವೊಬ್ಬರು ದೈವದ ವೇಷ ಧರಿಸಿ ಕಾಂತಾರ ಡೈಲಾಗ್ ಹೊಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.


Provided by

ರಿಷಬ್ ಶೆಟ್ಟಿ ನಟನೆಯ  ಕಾಂತಾರ ಚಿತ್ರ ಒಂದೆಡೆ ಹಲವು ವಿವಾದಗಳಿಗೆ  ಕಾರಣವಾಗಿದೆ. ಮತ್ತೊಂದೆಡೆಯಲ್ಲಿ ಜನರ ಮೆಚ್ಚುಗೆಯನ್ನೂ ಗಳಿಸಿದೆ. ಇದೀಗ ರಾಜ್ಯ ದಾಟಿ ಹೊರ ರಾಜ್ಯದಲ್ಲೂ ಕಾಂತಾರ ಚಿತ್ರಕ್ಕೆ ಜನಮನ್ನಣೆ ದೊರಕಿದೆ.

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದಾರೆ. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್ ಪ್ರಸಾದ್ ರಾವ್ ಅವರು ‘ಕಾಂತಾರ’ ಸಿನಿಮಾದ ಗೆಟಪ್ನಲ್ಲಿ ಕಾಣಿಸಿಕೊಂಡು ಕಾಂತಾರ ಚಿತ್ರದ ಡೈಲಾಗ್ ಹೊಡೆದರು.

ತಹಶೀಲ್ದಾರ್ ಪ್ರಸಾದ್ ರಾವ್ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇದ್ದು, ಈ ಕಾರ್ಯಕ್ರಮಕ್ಕೆ ‘ಕಾಂತಾರ’ ಚಿತ್ರದ ರೀತಿ ವೇಷ ಹಾಕಿಕೊಂಡು ಬಂದಿದ್ದರು. ಅವರನ್ನು ಕಂಡು ಅನೇಕ ಮಂದಿ ಅಚ್ಚರಿ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಹಲವರು  ಇವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ