ಬೆಂಗಳೂರು ಬಂದ್ ಎಫೆಕ್ಟ್: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ - Mahanayaka
7:54 PM Wednesday 10 - September 2025

ಬೆಂಗಳೂರು ಬಂದ್ ಎಫೆಕ್ಟ್: ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿದ ಅನಿಲ್ ಕುಂಬ್ಳೆ

anil kumble
11/09/2023

ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟ ಇಂದು ಕರೆ ನೀಡಿದ್ದ ಬಂದ್ ಎಫೆಕ್ಟ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಪ್ರಯಾಣಿಕರಿಗೂ ತಟ್ಟಿತು.


Provided by

ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರು ಕೂಡಾ ಟ್ಯಾಕ್ಸಿ ಇಲ್ಲದ ಕಾರಣ ವಿಮಾನ ನಿಲ್ದಾಣದಿಂದ ಬಿಎಂಟಿಸಿ ವಾಯುವಜ್ರ ಬಸ್ ನಲ್ಲಿ ಪ್ರಯಾಣಿಸಿದ ಘಟನೆ ನಡೆಯಿತು.

ಈ ಬಗ್ಗೆ ಫೋಟೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಮನೆಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ