ಮೈಸೂರು ಚಲೋಗೆ ಮತ್ತೊಂದು ಸಂಕಷ್ಟ: ಬಿಜೆಪಿಯೊಳಗೆ ಅಸಮಾಧಾನ ಸ್ಫೋಟ! - Mahanayaka
11:33 PM Saturday 18 - October 2025

ಮೈಸೂರು ಚಲೋಗೆ ಮತ್ತೊಂದು ಸಂಕಷ್ಟ: ಬಿಜೆಪಿಯೊಳಗೆ ಅಸಮಾಧಾನ ಸ್ಫೋಟ!

bjp
02/08/2024

ಬೆಂಗಳೂರು:  ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ—ಜೆಡಿಎಸ್ ಜಂಡಿ ಪಾದಯಾತ್ರೆಯಿಂದ ಜೆಡಿಎಸ್ ಹಿಂದಕ್ಕೆ ಸರಿದಿರುವುದು ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿಯಲ್ಲಿ ಕೋಲಾಹಲ ಎಬ್ಬಿಸಿದೆ. ಈ ನಡುವೆ ಈ ಪಾದಯಾತ್ರೆ ವಿರುದ್ಧ ಬಿಜೆಪಿಯೊಳಗೆಯೇ ಅಸಮಾಧಾನ ಸೃಷ್ಟಿಯಾಗಿದೆ.


Provided by

ಬಿಜೆಪಿಯಲ್ಲಿ ಅಸಮಾಧಾನಿತರ ಗುಂಪು ಸಭೆ ಸೇರಿ ಪಕ್ಷದ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಸಮರ ಸಾರಲು ಮತ್ತೊಂದು ವೇದಿಕೆ ಸಿದ್ಧ ಮಾಡಿಕೊಂಡಿದೆ.

ಬಿ.ವೈ. ವಿಜಯೇಂದ್ರ ವಿರೋಧಿ ಗುಂಪು  ಮೈಸೂರು ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲೂ ನಿರ್ಧರಿಸಿದ್ದು, ವಾಲ್ಮೀಕಿ ಹಗರಣದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಅನುಮತಿ ಕೊಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಡಲು ತೀರ್ಮಾನಿಸಿದೆ ಎನ್ನಲಾಗಿದೆ.

ವರದಿಗಳ ಪ್ರಕಾರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಬೆಂಗಳೂರಿನ ನಿವಾಸದಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ, ಮಾಜಿ ಸಂಸದ ಪ್ರತಾಪ್‌ ಸಿಂಹ  ಸಮಾನಮನಸ್ಕರ ಕೂಟವನ್ನು ರಚಿಸಿಕೊಂಡು ಬಿ.ವೈ. ವಿಜಯೇಂದ್ರ ಗುಂಪಿಗೆ ಬಿಸಿ ಮುಟ್ಟಿಸಲು ಯೋಜನೆ ರೂಪಿಸಿದ್ದಾರೆನ್ನಲಾಗಿದೆ.

ಇನ್ನೂ ಬಿ.ವೈ. ವಿಜಯೇಂದ್ರ ವಿರೋಧಿ ಬಣ ಹೆಚ್.ಡಿ.ಕುಮಾರಸ್ವಾಮಿ ಅವರು ತೆಗೆದುಕೊಂಡ ನಿರ್ಧಾರಗಳನ್ನು ಬೆಂಬಲಿಸಿದೆ. ಮೈಸೂರು ಪಾದಯಾತ್ರೆ ವಿಚಾರದಲ್ಲಿ ಕುಮಾರಸ್ವಾಮಿ ಅವರು ಒತ್ತಡಕ್ಕೆ ಮಣಿಯಬಾರದು. ಅವರ ಕುಟುಂಬದ ವಿರುದ್ಧ ಲಕ್ಷಾಂತರ ಪೆನ್‌ಡ್ರೈವ್‌ ಹಂಚಿದವರಿದ್ದಾರೆ. ಪಕ್ಷದ ಅರ್ಧ ಮಂದಿ ಪ್ರಧಾನ ಕಾರ್ಯದರ್ಶಿಗಳು ವಿಜಯೇಂದ್ರ ಚೇಲಾಗಳೇ ಇದ್ದಾರೆ. ಪೆನ್‌ಡ್ರೈವ್‌, ಸಿ.ಡಿ. ಮಾಡುವವರೇ ಸುತ್ತಲೂ ತುಂಬಿದ್ದಾರೆ. ಇದು ಕುಮಾರಸ್ವಾಮಿ ಕುಟುಂಬದ ಸ್ವಾಭಿಮಾನದ ಪ್ರಶ್ನೆ ಎಂದಿದೆ. ಅಲ್ಲೇ ಬಳ್ಳಾರಿ ಪಾದಯಾತ್ರೆಗೆ ಅವಕಾಶ ಕೊಡಬೇಕು ಅಂತ ಹೈಕಮಾಂಡ್ ಗೆ ಒತ್ತಡ ಹಾಕಲು ಮುಂದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ