ಮಂಗನ ಕಾಯಿಲೆಗೆ ಮತ್ತೊಂದು ಬಲಿ: ಕೂಲಿ ಕಾರ್ಮಿಕ ಮಹಿಳೆಯ ದಾರುಣ ಸಾವು - Mahanayaka

ಮಂಗನ ಕಾಯಿಲೆಗೆ ಮತ್ತೊಂದು ಬಲಿ: ಕೂಲಿ ಕಾರ್ಮಿಕ ಮಹಿಳೆಯ ದಾರುಣ ಸಾವು

monkeypox
28/02/2024

ಚಿಕ್ಕಮಗಳೂರು:  ಚಿಕ್ಕಮಗಳೂರಿನಲ್ಲಿ  ಕೆ.ಎಫ್.ಡಿ. ಸೋಂಕಿಗೆ ಮತ್ತೊಂದು ಬಲಿಯಾಗಿದ್ದು,  ಕೂಲಿ ಕಾರ್ಮಿಕರಾಗಿದ್ದ ಮಹಿಳೆಯೊಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ.

ಕೊಟ್ರಮ್ಮ (43) ಕೆ.ಎಫ್.ಡಿ.ಗೆ ಬಲಿಯಾದವರಾಗಿದ್ದಾರೆ.  ಕೊಪ್ಪ  ತಾಲ್ಲೂಕಿನ ನುಗ್ಗಿ ಗ್ರಾ.ಪಂ ವ್ಯಾಪ್ತಿಯ ದೇವಗನ್ ಎಸ್ಟೇಟ್ ಮಹಿಳೆ ಇವರಾಗಿದ್ದು,  ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು.

ಕಳೆದ ಸೋಮವಾರ ಮಹಿಳೆಯ ರಕ್ತದ ಮಾದರಿಯನ್ನು ವೈದ್ಯರು ಸಂಗ್ರಹಿಸಿದ್ದರು. ತೀವ್ರ ಅನಾರೋಗ್ಯ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ  ಅವರು ಕೊನೆಯುಸಿರೆಳೆದಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕೊಟ್ರಮ್ಮ ಅವರು ಎಸ್ಟೇಟಿಗೆ ಸೌದೆ ತರಲು ಹೋದಾಗ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ.  ಕೊಪ್ಪ ಹಾಗೂ ಎನ್.ಆರ್ ಪುರದಲ್ಲಿ ಮತ್ತೆ 6 ಮಂದಿಗೆ ಸೋಂಕು ತಗುಲಿದೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ.

ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/DX0jBN1UDJAJ6ORoqqqFkD

ಇತ್ತೀಚಿನ ಸುದ್ದಿ