ತನ್ನ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಪತ್ರ ಬರೆದು ಸಾವಿಗೀಡಾದ ಕುಮಾರಸ್ವಾಮಿಯ ಕಟ್ಟಾ ಅಭಿಮಾನಿ - Mahanayaka
6:14 PM Thursday 16 - October 2025

ತನ್ನ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಪತ್ರ ಬರೆದು ಸಾವಿಗೀಡಾದ ಕುಮಾರಸ್ವಾಮಿಯ ಕಟ್ಟಾ ಅಭಿಮಾನಿ

17/01/2021

ರಾಮನಗರ: ಮಾಜಿ ಮುಖ್ಯಮಂತ್ರಿ ಹೆಚ್.ಡಿ..ಕುಮಾರಸ್ವಾಮಿ ಅವರ ಕಟ್ಟಾ ಅಭಿಮಾನಿಯೋರ್ವರು ತನ್ನ ಸಾವಿಗೂ ಮೊದಲು, ತನ್ನ ಅಂತ್ಯಸಂಸ್ಕಾರಕ್ಕೆ ಬರುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿರುವ ಘಟನೆ ನಡೆದಿದೆ.


Provided by

ಗ್ಯಾಂಗ್ರೀನ್ ಸಮಸ್ಯೆಯಿಂದ ಬಳಲುತ್ತಿದ್ದ ರಾಮನಗರ ಜಿಲ್ಲೆಯ ಗಾಂಧಿನಗರ ನಿವಾಸಿ ಆರ್.ಜಯರಾಮ್ ಅವರು, ಕುಮಾರಸ್ವಾಮಿ ಅವರ ದೊಡ್ಡ ಅಭಿಮಾನಿಯಾಗಿದ್ದು,  ಆರೋಗ್ಯ ತೀವ್ರವಾಗಿ ಹದಗೆಟ್ಟು, ಸಾವಿನ ಸಮೀಪವಿರುವಾಗ ಜಯರಾಮ್ ಅವರು, ತನ್ನ ಅಂತ್ಯ ಸಂಸ್ಕಾರಕ್ಕೆ ಬರುವಂತೆ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.

ತನ್ನ ಬುದ್ಧಿ ಮಾಂಧ್ಯ ಮಗನಿಗೆ ಆರ್ಥಿಕ ನೆರವು ನೀಡುವಂತೆಯೂ ಅವರು ಪತ್ರದಲ್ಲಿ ಕೇಳಿಕೊಂಡಿದ್ದಾರೆ. ಪತ್ರ ಬರೆದ ಬಳಿಕ ನಿನ್ನೆ ಸಂಜೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಅವರು ನಿಧನರಾಗಿದ್ದಾರೆ.

ಇತ್ತೀಚಿನ ಸುದ್ದಿ