ಜನವಿರೋಧಿ ಮಸೂದೆ, ರೈತರಿಗೆ ಬೆಂಬಲ ಬೆಲೆಯಲ್ಲಿ ಮೋಸ: ರೈತ ಸಂಘ ಆಕ್ರೋಶ

ಅವೈಜ್ಞಾನಿಕ ತೆರಿಗೆ ನೀತಿ, ಅನಗತ್ಯ ಅಡಿಕೆ ಆಮದು, ಗಗನಕ್ಕೆ ಏರಿದ ಬೆಲೆ ಏರಿಕೆ, ತೆಂಗಿನ ಕಾಯಿಯ ಬೆಲೆ ಇಳಿಕೆಯಿಂದ ರೈತ ಕಂಗೆಟ್ಟಿದ್ದಾನೆ. ಅಲ್ಲದೇ ರಾಜ್ಯ ಸರಕಾರದ ಜನವಿರೋಧಿ ಮಸೂದೆಗಳು, ಬೆಂಬಲ ಬೆಲೆಯಲ್ಲಿನ ಮೋಸಗಳು, ಪ್ರಾಕೃತಿಕ ವಿಕೋಪ ಹಾಗೂ ಜಲಸ್ಫೋಟದಿಂದ ಸಂತ್ರಸ್ಥರಿಗೆ ವೈಜ್ಞಾನಿಕ ಪರಿಹಾರ ನೀಡುವಲ್ಲಿ ಹಾಗೂ ಮೂಲಭೂತ ಸೌಕರ್ಯಗಳನ್ನು ಮರುಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಬೆಳ್ತಂಗಡಿ ಭಾಗದ ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಹವಾಮಾನ ಆಧಾರಿತ ಬೆಳೆ ವಿಮೆಯ ಹೆಸರಲ್ಲಿ ರೈತರನ್ನು ವಂಚಿಸಿದ್ದಲ್ಲದೇ ಸರಕಾರದ ಖಜಾನೆಯಿಂದ ಲೂಟಿ ಮಾಡುತ್ತಿರುವ ವಿಮಾ ಕಂಪನಿಗಳ ಪರ ನಿಂತಿರುವುದು ಜಿಲ್ಲಾಡಳಿತದ ವಿಫಲತೆಯಿಂದ ಭ್ರಷ್ಟಾಚಾರದ ಕದಂಬ ಬಾಹುಗಳು ಎಲ್ಲಾ ಇಲಾಖೆಯಲ್ಲಿ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಬಡಜನತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು ರೈತ ಆತ್ಮಹತ್ಯೆಗಳಂತಹ ಸಾಮಾಜಿಕ ಪಿಡುಗು ಜೋರಾಗ್ತಿದೆ. ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ವೀರಪ್ಪ ಗೌಡ, ಕೃಷಿ ಪತ್ತಿನ ಸಹಕಾರಿ ಸಂಘದಿಂದ ಕೃಷಿ ಅಭಿವೃದ್ಧಿ ಸಾಲ ವಸೂಲಾತಿಯ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದೆ. ಇದನ್ನು ಖಂಡಿಸಿ ಮತ್ತು ಪ್ರಮುಖ ಸಮಸ್ಯೆಗಳನ್ನು ಪರಿಹಾರಕ್ಕೆ ಅಗ್ರಹಿಸಿ ಮಾರ್ಚ್ 25ರ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಪ್ರತಿಭಟನಾ ಧರಣಿಯನ್ನು ಮಾಡಲು ತೀರ್ಮಾನಿಸಿದ್ದೀವಿ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw