2020 ರ ಕಲ್ಲಿದ್ದಲು ಗಣಿ ದಾಳಿ ಪ್ರಕರಣ: 3 ಸ್ಥಳಗಳ ಮೇಲೆ ಭಯೋತ್ಪಾದನಾ ನಿಗ್ರಹ ಸಂಸ್ಥೆ ದಾಳಿ - Mahanayaka
11:36 AM Saturday 23 - August 2025

2020 ರ ಕಲ್ಲಿದ್ದಲು ಗಣಿ ದಾಳಿ ಪ್ರಕರಣ: 3 ಸ್ಥಳಗಳ ಮೇಲೆ ಭಯೋತ್ಪಾದನಾ ನಿಗ್ರಹ ಸಂಸ್ಥೆ ದಾಳಿ

20/06/2024


Provided by

ಟೆಟಾರಿಯಾಖಡ್ ಕಲ್ಲಿದ್ದಲು ಗಣಿಯಲ್ಲಿ 2020 ರ ಗ್ಯಾಂಗ್ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಜಾರ್ಖಂಡ್ ನ ಹಜಾರಿಬಾಗ್ ಮತ್ತು ರಾಂಚಿ ಜಿಲ್ಲೆಗಳ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿದೆ.
ದಾಳಿ ನಡೆಸಿದ ಆವರಣವು “ಜಾರ್ಖಂಡ್ ನ ಕುಖ್ಯಾತ ಅಮನ್ ಸಾಹು ಗ್ಯಾಂಗ್‌ನ ಸಹಚರರೊಂದಿಗೆ ಸಂಪರ್ಕ ಹೊಂದಿದೆ” ಎಂದು ಸಂಸ್ಥೆ ಹೇಳಿದೆ.

ದಾಳಿ ವೇಳೆ ಏಜೆನ್ಸಿಯು ಡಿಜಿಟಲ್ ಸಾಧನ, ಫಾರ್ಚೂನರ್ ವಾಹನ ಮತ್ತು ಕೆಲವು ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಜಾರ್ಖಂಡ್ ನ ಲತೇಹರ್ ಜಿಲ್ಲೆಯ ಟೆಟಾರಿಯಾಖಂಡ್ ಕಲ್ಲಿದ್ದಲು ಗಣಿಯಲ್ಲಿ ಸುಜಿತ್ ಸಿನ್ಹಾ, ಅಮನ್ ಸಾಹು ಮತ್ತು ಇತರ ಗ್ಯಾಂಗ್ಗಳ ಸದಸ್ಯರು ನಡೆಸಿದ ದಾಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಎನ್ಐಎ ಈ ಹಿಂದೆ 24 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.
ಹಣವನ್ನು ಸುಲಿಗೆ ಮಾಡಲು ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಲು ಗ್ಯಾಂಗ್ ಗಳು ನಡೆಸಿದ ಕ್ರಿಮಿನಲ್ ಪಿತೂರಿಯ ಭಾಗವಾಗಿ 2020 ರ ಡಿಸೆಂಬರ್‌ನಲ್ಲಿ ಈ ದಾಳಿ ನಡೆದಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ