ಸೋಷಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡ ನಟಿ ಅನುಷ್ಕಾ ಶೆಟ್ಟಿ: ಕಾರಣ ಏನು?

ನಟಿ ಅನುಷ್ಕಾ ಶೆಟ್ಟಿ ನಟನೆಯ ಘಾಟಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೇ ನಟಿ ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದು, ಪೆನ್ನಿಂದ ಬರೆದ ಕೈಬರಹವನ್ನು ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು ಸಾಮಾಜಿಕ ಮಾಧ್ಯಮದಿಂದ ವಿರಾಮ ಪಡೆದುಕೊಳ್ಳುವುದಾಗಿ ಬರೆದುಕೊಂಡಿದ್ದಾರೆ,
“ನೀಲಿ ಬೆಳಕನ್ನು ಮೇಣದಬತ್ತಿಯ ಬೆಳಕಿಗೆ ವ್ಯಾಪಾರ ಮಾಡುವುದು… (ಸ್ಮೈಲ್ ಎಮೋಜಿ). ಸ್ವಲ್ಪ ಸಮಯದವರೆಗೆ ಸಾಮಾಜಿಕ ಮಾಧ್ಯಮದಿಂದ ದೂರ ಸರಿಯುತ್ತೇನೆ, ಜಗತ್ತಿಗೆ ಮರುಸಂಪರ್ಕಿಸಲು ಮತ್ತು ಸ್ಕ್ರೋಲಿಂಗ್ ಮೀರಿ ಕೆಲಸ ಮಾಡಲು, ನಾವೆಲ್ಲರೂ ನಿಜವಾಗಿಯೂ ಪ್ರಾರಂಭಿಸಿದ ಸ್ಥಳಕ್ಕೆ. ಶೀಘ್ರದಲ್ಲೇ ಹೆಚ್ಚಿನ ಸ್ಟೋರಿಗಳು ಮತ್ತು ಹೆಚ್ಚಿನ ಪ್ರೀತಿಯೊಂದಿಗೆ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇವೆ….ಯಾವಾಗಲೂ ಶಾಶ್ವತವಾಗಿ…ಯಾವಾಗಲೂ ನಗು. ಲವ್ ಅನುಷ್ಕಾ ಶೆಟ್ಟಿ ಎಂದು ಅವರು ಬರೆದಿದ್ದಾರೆ.
ಟಿಪ್ಪಣಿ ಹಂಚಿಕೊಂಡ ಅನುಷ್ಕಾ ಪೋಸ್ಟ್ ಗೆ “ಲವ್ …. ಯಾವಾಗಲೂ ಶಾಶ್ವತವಾಗಿ (ರೆಡ್ ಹಾರ್ಟ್ ಎಮೋಜಿ)” ಎಂದು ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಯೊಬ್ಬರು, “ಓಹ್, ನೀನು ನಿಜ ಜಗತ್ತಿಗೆ ಹಿಂತಿರುಗುತ್ತಿದ್ದೀಯ. ನಿನ್ನನ್ನು ನೋಡಲು ಕಾಯಲು ಸಾಧ್ಯವಿಲ್ಲ, ಸ್ವೀಟಿ.” ಎಂದು ಹೇಳಿದರು.
ಘಾಟಿ ಚಿತ್ರದ ಸೋಲಿನಿಂದ ಅನುಷ್ಕಾ ಕಂಗೆಟ್ಟರೇ, ಹೀಗಾಗಿ ಸಾಮಾಜಿಕ ಜಾಲತಾಣಗಳಿಂದ ಅವರು ವಿರಾಮ ಘೋಷಿಸಿದರೆ ಎನ್ನುವುದು ತಿಳಿದು ಬಂದಿಲ್ಲ, ಸದ್ಯ ಜನಪ್ರಿಯ ನಟಿ ಸಾಮಾಜಿಕ ಜಾಲತಾಣಗಳಿಂದ ಹೊರ ಹೋಗಿರುವುದು ಅಭಿಮಾನಿಗಳಿಗೆ ತೀವ್ರ ನೋವನ್ನುಂಟು ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD