ಕಾರ್ ಗೆ ಬುಲೆಟ್ ಡಿಕ್ಕಿ: ಇಬ್ಬರು ಯುವಕರ ದಾರುಣ ಸಾವು | ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣವಾಯ್ತೆ? - Mahanayaka
1:54 AM Thursday 16 - October 2025

ಕಾರ್ ಗೆ ಬುಲೆಟ್ ಡಿಕ್ಕಿ: ಇಬ್ಬರು ಯುವಕರ ದಾರುಣ ಸಾವು | ನಿರ್ಲಕ್ಷ್ಯದ ಚಾಲನೆ ಅಪಘಾತಕ್ಕೆ ಕಾರಣವಾಯ್ತೆ?

09/02/2021

ಕುಂದಾಪುರ: ಕಾರೊಂದು ಬುಲೆಟ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬುಲೆಟ್ ಸವಾರರು ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ಕುಂದಾಪುರ ಚರ್ಚ್ ರಸ್ತೆ ಬಳಿ ನಡೆದಿದೆ.


Provided by

ಬೈಕ್ ಚಲಾಯಿಸುತ್ತಿದ್ದ ಕುಂದಾಪುರ ನೇರಳಟ್ಟೆ ನಿವಾಸಿ, 24 ವರ್ಷದ ಕಿರಣ್ ಮೇಸ್ತಾ ಹಾಗೂ   ಹಿಂಬದಿ ಸವಾರ ರವೀಂದ್ರ ಕುಮಾರ್ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಶ್ಯಾಮಲಾ ಎಂಬವರು ಮದ್ದುಗುಡ್ಡೆಯಿಂದ ಕುಂದಾಪುರ ಕಡೆಗೆ ಚಲಾಯಿಸಿಕೊಂಡು ಬಂದ ಮಾರುತಿ ಆಲ್ಟೋ ಕಾರು ಬುಲೆಟ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ.

ಕಾರು ಚಾಲಕಿಯ ನಿರ್ಲಕ್ಷ್ಯದ ಚಾಲನೆಯಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಅಪಘಾತದ ವೇಳೆ ಇಬ್ಬರು ಯುವಕರಿಗೆ ಕೂಡ ತೀವ್ರವಾಗಿ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ . ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ