ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಬಿಡುಗಡೆ: ಸಿಆರ್‌ ಪಿಎಫ್ ಶಿಬಿರಕ್ಕೆ ಬಂದ ರಾಕೇಶ್ವರ ಸಿಂಗ್ - Mahanayaka
6:47 AM Saturday 18 - October 2025

ನಕ್ಸಲರಿಂದ ಅಪಹರಣಕ್ಕೊಳಗಾಗಿದ್ದ ಯೋಧ ಬಿಡುಗಡೆ: ಸಿಆರ್‌ ಪಿಎಫ್ ಶಿಬಿರಕ್ಕೆ ಬಂದ ರಾಕೇಶ್ವರ ಸಿಂಗ್

rakeshwara singh
08/04/2021

ಛತ್ತೀಸ್ ಘರ್: ಕೋಬ್ರಾ ಪಡೆಯ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ನಕ್ಸಲರಿಂದ ಬಿಡುಗಡೆಯಾಗಿದ್ದು, ಬಿಡುಗಡೆಯ ಬಳಿಕ ಬಿಜಾಪುರದ ಸಿಆರ್‌ ಪಿಎಫ್ ಶಿಬಿರಕ್ಕೆ ಅವರನ್ನು ಕರೆತರಲಾಗಿದೆ.


Provided by

ನಾವು ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ರನ್ನು ಸುರಕ್ಷಿತವಾಗಿ ಮರಳಿ ತಂದಿದ್ದೇವೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಬಿಜಾಪುರ ಎಸ್ ಪಿ

ನಾವು ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತಂದಿದ್ದೇವೆ. ಅವರು ಇಲ್ಲಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ ಎಂದು ಬಿಜಾಪುರ ಎಸ್ಪಿ ಹೇಳಿದ್ದಾರೆ.

ಸಿಆರ್‌ಪಿಎಫ್ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಪತ್ನಿ ಮೀನು  ತಮ್ಮ ಪತಿ ಬಿಡುಗಡೆಗೊಂಡಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.  ಇಂದು ನನ್ನ ಜೀವನದ ಅತ್ಯಂತ ಸಂತೋಷದಾಯಕ ದಿನ. ಅವರು ಹಿಂದಿರುಗುವ ಬಗ್ಗೆ ನಾನು ಯಾವಾಗಲೂ ಭರವಸೆ ಹೊಂದಿದ್ದೆ ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 3 ರಂದು ನಡೆದ ಬಿಜಾಪುರ ನಕ್ಸಲ್ ದಾಳಿಯ ವೇಳೆ ರಾಕೇಶ್ವರ ಸಿಂಗ್ ಅವರನ್ನು ನಕ್ಸಲರು ಅಪಹರಿಸಿದ್ದರು. ಏಪ್ರಿಲ್ 3 ರಂದು ಬಸ್ತಾರ್ ಪ್ರದೇಶದಲ್ಲಿ ನಡೆದ ಗುಂಡಿನ ಕಾಳಗದ ನಂತರ ನಕ್ಸಲರಿಂದ ಅಪಹರಿಸಲ್ಪಟ್ಟ ಕೋಬ್ರಾ ಪಡೆಯ ಯೋಧ ರಾಕೇಶ್ವರ ಸಿಂಗ್ ಅವರನ್ನು ಇಂದು ನಕ್ಸಲರಿಂದ ಬಿಡುಗಡೆ  ಮಾಡಿದ್ದಾರೆ.

ಇತ್ತೀಚಿನ ಸುದ್ದಿ