ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದ ಎಸ್ ಬಿ ಐ - Mahanayaka
6:51 AM Wednesday 20 - August 2025

ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದ ಎಸ್ ಬಿ ಐ

10/02/2021


Provided by

ನವದೆಹಲಿ: ಜನ್ ಧನ್ ಖಾತೆದಾರರಿಗೆ  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಭರ್ಜರಿ ಉಡುಗೊರೆಯನ್ನು ನೀಡಿದ್ದು,  ಎಸ್‌ ಬಿಐ ರುಪೇ ಜನ್ ಧನ್ ಕಾರ್ಡ್‌ ಗೆ ಅರ್ಜಿ ಸಲ್ಲಿಸಿದರೆ 2 ಲಕ್ಷ ರೂಪಾಯಿವರೆಗೆ ಅಪಘಾತ ವಿಮೆ ಸಿಗಲಿದೆ ಎಂದು ಎಸ್‌ಬಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದೆ.

ಇದನ್ನು ಪಡೆಯಲು ನಿಯಮಾವಳಿಗಳು ಹೀಗಿದ್ದು, ಖಾತೆ ದಾರರು ತಮ್ಮ ಕಾರ್ಡ್ ನ್ನು 90 ದಿನಗಳಿಗೊಮ್ಮೆಯಾದರೂ ಸ್ವೈಪ್ ಮಾಡಬೇಕು. ಹೀಗೆ ಮಾಡಿದರೆ, 2 ಲಕ್ಷ ರೂಪಾಯಿ ಅಪಘಾತ ವಿಮೆ ದೊರೆಯಲಿದೆ.

ಜನ್ ಧನ್ ಖಾತೆಗೆ ಸರ್ಕಾರಿ ಯೋಜನೆಗಳ ಹಣ ನೇರವಾಗಿ ಖಾತೆಗೆ ಬರುತ್ತದೆ. ಉಚಿತ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಸಿಗಲಿದೆ. ಅಪಘಾತ ವಿಮೆ 2 ಲಕ್ಷ ರೂಪಾಯಿವರೆಗೆ ಸಿಗಲಿದೆ. 30,000 ರೂಪಾಯಿವರೆಗೆ ಲೈಫ್ ಕವರ್ ಸಿಗಲಿದೆ. ಖಾತೆ ತೆರೆಯುವವರಿಗೆ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತದೆ. ಠೇವಣಿ ಮೇಲೆ ಬಡ್ಡಿ ಸಿಗುತ್ತದೆ. ವಿಮೆ, ಪಿಂಚಣಿ ಉತ್ಪನ್ನಗಳನ್ನು ಖಾತೆಗಳ ಮೂಲಕ ಖರೀದಿಸಬಹುದು. ಜನ್ ಧನ್ ಖಾತೆ ಇದ್ದರೆ, ಪಿಎಂ ಕಿಸಾನ್ ಮತ್ತು ಶ್ರಮಯೋಗಿ ಮಾನ್ಧನ್ ನಂತಹ ಪಿಂಚಣಿ ಯೋಜನೆಯಲ್ಲಿ ಖಾತೆಗಳನ್ನು ತೆರೆಯಬಹುದು.

ಇತ್ತೀಚಿನ ಸುದ್ದಿ