ಕೋವಿಡ್ ಲಸಿಕೆ ಪಡೆದ ವರ್ಷವೇ ಅಪ್ಪು ನಿಧನ: ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ಬಗ್ಗೆ ಭಾರೀ ಚರ್ಚೆ - Mahanayaka

ಕೋವಿಡ್ ಲಸಿಕೆ ಪಡೆದ ವರ್ಷವೇ ಅಪ್ಪು ನಿಧನ: ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆ ಬಗ್ಗೆ ಭಾರೀ ಚರ್ಚೆ

punith rajakumar
03/05/2024


Provided by

ಬೆಂಗಳೂರು: ಕೋವಿಶೀಲ್ಡ್ ಕೊರೊನಾ ಲಸಿಕೆಯ ಅಡ್ಡಪರಿಣಾಮಗಳ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಅಸ್ಟ್ರಾಜೆನೆಕಾ ತನ್ನ ಕೋವಿಡ್ -19 ಲಸಿಕೆಯಾಗಿರುವ ಎಝೆಡ್ ಲಸಿಕೆಯು ಟಿಟಿಎಸ್ ಎಂಬ ಅಡ್ಡಪರಿಣಾಮಕ್ಕೆ ಕಾರಣವಾಗಬಹುದು ಎಂದು ಒಪ್ಪಿಕೊಂಡ ಬಳಿಕ ಸೆಲೆಬ್ರಿಟಿಗಳ ಅಕಾಲಿಕ ಸಾವಿಗೂ ಕೋವಿಡ್ ಲಸಿಕೆಗೂ ಸೋಷಿಯಲ್ ಮೀಡಿಯಾದಲ್ಲಿ ಹೋಲಿಕೆ ಮಾಡಿ ಚರ್ಚೆ ನಡೆಯುತ್ತಿದೆ.

ಈ ಪೈಕಿ ಕರ್ನಾಟಕದಲ್ಲಿ ಪುನೀತ್ ರಾಜ್‌ಕುಮಾರ್ ಸಾವಿಗೂ ಕೋವಿಶೀಲ್ಡ್ ಲಸಿಕೆ ಕಾರಣವೆಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಪುನೀತ್ ಮೊದಲ ಲಸಿಕೆ ಪಡೆದ ದಿನಾಂಕ:

ಪುನೀತ್ ರಾಜ್ ಕುಮಾರ್ ಅವರು ಟ್ವಿಟ್ಟರ್ ನಲ್ಲಿ ಕೊರೊನಾ ಲಸಿಕೆ ಪಡೆದ ಕುರಿತು ಅಪ್ ಡೇಟ್ ನೀಡಿದ್ದರು. “ಇಂದು ನಾನು ಮೊದಲ ವ್ಯಾಕ್ಸಿನೇಷನ್ ಡೋಸ್ ಪಡೆದಿರುವೆ. ನೀವು 45 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ, ತಪ್ಪದೇ ಲಸಿಕೆ ಪಡೆಯಿರಿ” ಎಂದು ಪೋಸ್ಟ್ ಮಾಡಿದ್ದರು.

ಪುನೀತ್ ರಾಜ್‌ಕುಮಾರ್ ಏಪ್ರಿಲ್ 7, 2021ರಲ್ಲಿ ಈ ಕುರಿತು ಎಕ್ಸ್ ನಲ್ಲಿ (ಹಳೆಯ ಟ್ವಿಟ್ಟರ್) ಪೋಸ್ಟ್ ಮಾಡಿದ್ದರು. ಅದೇ ಸಮಯದಲ್ಲಿ ಬೃಂದಾವನ ಎಂಬ ಟ್ವಿಟ್ಟರ್ ಖಾತೆದಾರರೊಬ್ಬರು “ಕೋವಿಶೀಲ್ಡ್ ತೆಗೆದುಕೊಳ್ಳಬೇಡಿ ಸರ್, ಅದು 45 ವರ್ಷ ಮೇಲ್ಪಟ್ಟವರಿಗೆ ಒಳ್ಳೆಯದಲ್ಲ” ಎಂದು ಕಾಮೆಂಟ್ ಮಾಡಿದ್ದರು.

ಇವರ ಕಾಮೆಂಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ. “ನಿಮ್ಮ ಮಾತನ್ನು ಅಂದು ಅವರು ಕೇಳುತ್ತಿದ್ದರೆ, ಅವರಿಂದು ಬದುಕಿ ಇರುತ್ತಿದ್ದರು” “ಸಹೋದರ ಸರಿಯಾಗಿ ಹೇಳಿದ್ದಾರೆ” “ನೀವು ಹೇಳಿದ್ದಂತೆ ಆಗಿದೆ” ಎಂದೆಲ್ಲ ಅಪ್ಪು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

ಆದರೆ, ಪುನೀತ್ ರಾಜ್‌ಕುಮಾರ್ ಅವರು ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಗಳಲ್ಲಿ ಯಾವ ಲಸಿಕೆ ಪಡೆದಿದ್ದರು ಎಂಬ ಮಾಹಿತಿ ಇಲ್ಲ.

ಲಸಿಕೆ ಪಡೆದ ವರ್ಷವೇ ಅಪ್ಪು ನಿಧನ:

ಪುನೀತ್ ರಾಜ್‌ಕುಮಾರ್ ಏಪ್ರಿಲ್ 7, 2021ರಂದು ಮೊದಲ ಲಸಿಕೆ ಪಡೆದಿದ್ದರು. ಅದೇ ವರ್ಷ ಅಕ್ಟೋಬರ್ 29ರಂದು ನಿಧನರಾಗಿದ್ದರು. ಮೊದಲ ಲಸಿಕೆ ಪಡೆದ ಏಳು ತಿಂಗಳಲ್ಲಿ ಹೃದಯಘಾತದಿಂದ ಮೃತಪಟ್ಟರು. ಎರಡನೇ ಲಸಿಕೆ ಯಾವಾಗ ಪಡೆದರು ಎಂಬ ಮಾಹಿತಿ ಲಭ್ಯವಿಲ್ಲ. ಅಪ್ಪು ನಿಧನರಾದ ಸಮಯದಲ್ಲಿಯೂ ಸಾಕಷ್ಟು ಜನರು ಇದು ಕೊರೊನಾ ಲಸಿಕೆ ಅಡ್ಡಪರಿಣಾಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪುನೀತ್ ರಾಜ್‌ಕುಮಾರ್ ಮಾತ್ರವಲ್ಲದೆ ಇನ್ನಷ್ಟು ಸೆಲೆಬ್ರಿಟಿಗಳ ಸಾವಿಗೆ ಕೊರೊನಾ ಲಸಿಕೆಯೇ ಕಾರಣವಾಗಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. 20ರಿಂದ 30 ವರ್ಷದ ಮೇಲ್ಪಟ್ಟವರು ಕೂಡ ಕುಸಿದು ಬಿದ್ದು ಮೃತಪಡುವುದಕ್ಕೆ ಲಸಿಕೆಯೇ ಕಾರಣ ಎನ್ನುವ ಚರ್ಚೆಗಳು ವ್ಯಾಪಕವಾಗಿ ಕೇಳಿ ಬಂದಿದೆ. ಸಾಕಷ್ಟು ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿhttps://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ