ಅಪಾರ್ಟ್ ಮೆಂಟ್ ನಿಂದ ಮಗುವನ್ನು ಕೆಳಕ್ಕೆಸೆದು ಕೊಂದ ತಾಯಿ!: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಬೆಂಗಳೂರು: ತಾಯಿಯೊಬ್ಬಳು ಅಪಾರ್ಟ್ ಮೆಂಟ್ ನಿಂದ ತನ್ನ ಮಗುವನ್ನು ಕೆಳಗೆಸೆದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಪಂಗಿ ರಾಮನಗರದ ಅದಿತ್ವ ನಡೆದಿದೆ.
ಮೃತ ಮಗುವನ್ನು ನಾಲ್ಕು ವರ್ಷದ ಜೀತಿ ಎಂದು ಗುರುತಿಸಲಾಗಿದೆ.ಅಪಾರ್ಟ್ ಮೆಂಟ್ ನಲ್ಲಿ ತಾಯಿ ತನ್ನ ಮಗಳನ್ನು ಎಸೆಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳೆದ ಮೂರು ತಿಂಗಳ ಹಿಂದೆಯೇ ತಾಯಿ ಈ ಮಗುವನ್ನು ರೈಲ್ವೆ ಸ್ಟೇಷನ್ ನಲ್ಲಿ ಬಿಟ್ಟು ಬಂದಿದ್ದಳು ಎನ್ನಲಾಗಿದೆ. ಈ ವೇಳೆ ಮಗುವನ್ನು ತಂದೆ ಹುಡುಕಿ ಕರೆದುಕೊಂಡು ಬಂದಿದ್ದಾರೆನ್ನಲಾಗಿದೆ.
ಇದೀಗ ಮಗುವನ್ನು ಕೊಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರು ಆಕೆಯನ್ನು ಕಾಪಾಡಿದ್ದಾರೆ. ಬುದ್ಧಿಮಾಂದ್ಯ ಮಗು ಎಂದು ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಮಗುವನ್ನು ಕೊಂದ ಮಹಿಳೆ ದಂತ ವೈದ್ಯೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದಳು. ತಂದೆ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿದ್ದರು. ಇದೀಗ ತಾಯಿಯ ವಿರುದ್ಧ ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ಯ ಯುವ ಸಂಘಗಳ ಒಕ್ಕೂಟದ ಯುವ ಪ್ರಶಸ್ತಿಗೆ ರಾಮಾಂಜಿ ಆಯ್ಕೆ
“ಈಗ ಬರುತ್ತೇನೆ” ಎಂದು 90ರ ವಯಸ್ಸಿನ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟು ಪರಾರಿಯಾದ ಮಗ!