ಅರ್ಚಕಗೆ ಕೊರೊನಾ | ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಗೆ ಕೊರೊನಾ ಭೀತಿ - Mahanayaka
11:01 PM Wednesday 15 - October 2025

ಅರ್ಚಕಗೆ ಕೊರೊನಾ | ಜನಪ್ರತಿನಿಧಿಗಳು ಸೇರಿದಂತೆ ಸಾರ್ವಜನಿಕರಿಗೆ ಕೊರೊನಾ ಭೀತಿ

corona
06/04/2021

ಯಳಂದೂರು: ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿರಂಗನಾಥಸ್ವಾಮಿ ದೇಗುಲದ ಅಮ್ಮನವರಿಗೆ ಪೂಜೆ ಸಲ್ಲಿಸುವ ಅರ್ಚಕರೂ ಸೇರಿದಂತೆ ಇವರ ಕುಟುಂಬ ಮೂವರು ಸೇರಿದಂತೆ ಒಟ್ಟು ನಾಲ್ಕು ಜನರಿಗೆ ಕೊರೊನಾ ಬಂದಿದ್ದು, ಇದೀಗ ಇವರ ಜೊತೆಹಗೆ ಪೂಜೆಯಲ್ಲಿ ಭಾಗವಹಿಸಿದ್ದ ಜನಪ್ರತಿನಿಧಿಗಳಿಗೆ ಹಾಗೂ ಸಾರ್ವಜನಿಕರಿಗೆ ಆತಂಕ ಉಂಟಾಗಿದೆ.


Provided by

ಏ.2 ರಂದು ದೇಗುಲದ ಮಹಾಸಂಪ್ರೋಕ್ಷಣಾ ಕಾರ್ಯಕ್ರಮ ನಡೆದಿದ್ದು ಇದರಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರಿಗೆ ಏ. 4 ರಂದು ಕೋವಿಡ್‌ ದೃಢಪಟ್ಟಿತ್ತು.ಈ ಹಿನ್ನೆಲೆಯಲ್ಲಿ ಇಲ್ಲಿನ ಅರ್ಚಕರೂ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ಇವರಲ್ಲಿ ಇಬ್ಬರಿಗೆ ಕೋವಿಡ್‌ನ ಲಕ್ಷಣಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಐದು ದಿನಗಳ ಕಾಲ ನಡೆದ ಮಹಾಸಂಪ್ರೋಕ್ಷಣೆ, ಧಾರ್ಮಿಕ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು. ಅಲ್ಲದೆ ಭಕ್ತರಿಗೆ ಪೂಜೆಯನ್ನು ನೆರವೇರಿಸಿದ್ದರು. ಅಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್, ಕೊಳ್ಳೇಗಾಲ ಕ್ಷೇತ್ರದ ಶಾಸಕರಾದ ಎನ್. ಮಹೇಶ್, ಆರ್. ನರೇಂದ್ರ, ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ ಸೇರಿದಂತೆ ಹಲವರು ಹಾಜರಿದ್ದರು. ಅಲ್ಲದೆ ಇದಾದ ನಂತರ ದೇಗುಲಕ್ಕೆ ಸಾವಿರಾರು ಭಕ್ತರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ಇತ್ತೀಚಿನ ಸುದ್ದಿ