ಅರ್ಚಕನ ಮಾದಕ ಜಾಲ ಬಯಲು: ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕ ಅರೆಸ್ಟ್ - Mahanayaka
11:45 PM Tuesday 14 - October 2025

ಅರ್ಚಕನ ಮಾದಕ ಜಾಲ ಬಯಲು: ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕ ಅರೆಸ್ಟ್

ganja jala
30/09/2021

ಕಾರವಾರ: ಅರ್ಚಕನೋರ್ವನ ಮಾದಕ ಜಾಲ ಬಯಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಅರ್ಚಕನ ಮನೆಗೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು ಆರೋಪಿ ಅರ್ಚಕನನ್ನು ಬಂಧಿಸಿದ್ದಾರೆ.


Provided by

ಮಾಯ್ನೇರ ಮನೆಯ ಚಂದ್ರಶೇಖರ ಭಟ್ ಬಂಧಿತ ಆರೋಪಿಯಾಗಿದ್ದು,  ಈತ ಸ್ಥಳೀಯ ದೇವಸ್ಥಾನದ ಪೂಜೆ ಮಾಡಿಕೊಂಡಿದ್ದ ಎನ್ನಲಾಗಿದೆ. ಒಂದು ಕಡೆಯಲ್ಲಿ ಪೂಜೆ ಮಾಡುತ್ತಿದ್ದ ಭಟ್ ಇನ್ನೊಂದು ಕಡೆಯಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿದ್ದು, ಈ ಆಧಾರದಲ್ಲಿ ಪೊಲೀಸರು ಆರೋಪಿಯ ಮನೆಗೆ ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಇಡೀ ಮನೆಯನ್ನು ಜಾಲಾಡಿದರೂ ಗಾಂಜಾ ಸಿಕ್ಕಿರಲಿಲ್ಲ. ಆದರೆ, ಕೊನೆಗೆ ಆತನ ಅಡುಗೆ ಮನೆಗೆ ಸಿಬ್ಬಂದಿ ನುಗ್ಗಿದ್ದು, ಈ ವೇಳೆ ಮನೆಯ ಗ್ಯಾಸ್ ಕಟ್ಟೆಯ ಒಳಗಡೆ ಗಾಂಜಾ ಬಚ್ಚಿಟ್ಟಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಆರೋಪಿಯ ಬಳಿಯಲ್ಲಿ 140 ಗ್ರಾಂ ಗಾಂಜಾ ಪತ್ತೆಯಾಗಿದೆ ಎನ್ನಲಾಗಿದೆ.

ಸಿದ್ದಾಪುರ ತಾಲೂಕಿನ ಮಾಯ್ನೇರ್‌ಮನೆ ಕುಗ್ರಾಮವಾಗಿದೆ. ಇಲ್ಲಿ ಈತ ತನ್ನ ಮನೆಯಲ್ಲಿಯೇ ಗಾಂಜಾ ಮಾರಾಟ ಮಾಡುತ್ತಿದ್ದ ಎನ್ನುವ ಬಗ್ಗೆ ಈ ಹಿಂದಿನಿಂದಲೂ ಅನುಮಾನಗಳಿದ್ದವು. ಮನೆಯ ಬಳಿ ಕೆಲವು ಕಾಲೇಜು ವಿದ್ಯಾರ್ಥಿಗಳು ಗಾಂಜಾ ಖರೀದಿಸಲು ಭೇಟಿ ನೀಡುವ ಮಾಹಿತಿ ಕೂಡಾ ಲಭಿಸಿತ್ತು. ಕೊನೆಗೆ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ಮಾಡಿದ್ದರು. ಅಧಿಕಾರಿಗಳ ದಾಳಿ ನಡೆಯುವ ದಿನವೂ ಮೂರ್ನಾಲ್ಕು ಕಾಲೇಜು ವಿದ್ಯಾರ್ಥಿಗಳು ಗಾಂಜಾ ಖರೀದಿಗೆ ಬಂದಿದ್ದರು ಎನ್ನಲಾಗಿದೆ. ಆದರೆ, ಅಧಿಕಾರಿಗಳ ಜೀಪ್ ಕಂಡು ವಿದ್ಯಾರ್ಥಿಗಳು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ಉದ್ಯೋಗ ನೀಡುವ ಬದಲು, ಬಿಜೆಪಿ ಹಿಂದೂ ರಾಷ್ಟ್ರದ ಹೆಸರಿನಲ್ಲಿ ಯುವಕರನ್ನು ದಾರಿ ತಪ್ಪಿಸುತ್ತಿದೆ | ಕುಮಾರಸ್ವಾಮಿ

ನೆಹರೂ ಒಪ್ಪಿದ್ದ ಆರೆಸ್ಸೆಸ್ ನ್ನು  ಕಾಂಗ್ರೆಸ್ ಒಪ್ಪಿಕೊಳ್ಳಲಿ | ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ತಮ್ಮ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಿದ ಪಂಜಾಬ್ ನ ಮಾಜಿ ಸಿಎಂ ಅಮರೀಂದರ್ ಸಿಂಗ್!

ಸುಳ್ಯ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯಿಂದ ಅಂಬೇಡ್ಕರ್ ಅವರ ಜೀವನ ಕುರಿತ ಹಾಡು ಬಿಡುಗಡೆ

ಯತೀಶ್ ಕುಮಾರ್ ರವರಿಗೆ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಮಾಡಿದ ರವಿ ಡಿ. ಚೆನ್ನಣ್ಣನವರ್

ಶಿವಮೊಗ್ಗ ಡಿಸಿ ಕಚೇರಿ ಸಿಬ್ಬಂದಿ ನಾಪತ್ತೆಗೆ ಹೊಸ ತಿರುವು: ನಾಪತ್ತೆಯಾದ ದಿನ ಹಣ ಡ್ರಾ ಮಾಡಿದ್ದ ಗಿರಿರಾಜ್!

ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ | ನರ್ಸಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ