ಬಿಜೆಪಿಯ ಬಡ ಕಾರ್ಯಕರ್ತರು ಗ್ಯಾರೆಂಟಿ ಲಾಭ ಪಡೆಯುತ್ತಿಲ್ವಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ - Mahanayaka

ಬಿಜೆಪಿಯ ಬಡ ಕಾರ್ಯಕರ್ತರು ಗ್ಯಾರೆಂಟಿ ಲಾಭ ಪಡೆಯುತ್ತಿಲ್ವಾ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

siddaramaiah
09/12/2024

ಹಾವೇರಿ:  ಗ್ಯಾರೆಂಟಿ ಯೋಜನೆ ಜಾರಿ ಮಾಡಿದ್ರೆ ಅಭಿವೃದ್ಧಿ ಯೋಜನೆಗೆ ಹಣ ಬರಲ್ಲ ಅಂತ ಪ್ರಧಾನಿ ಮೋದಿ(PM Modi) ಅಪಹಾಸ್ಯ ಮಾಡಿದ್ರು. ಬಿಜೆಪಿಯ ಬಡ ಕಾರ್ಯಕರ್ತರು ಇದರ(ಗ್ಯಾರೆಂಟಿ) ಲಾಭ ಪಡೆಯುತ್ತಿಲ್ವಾ? ಎಂದು ಸಿಎಂ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದರು.

ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ನಡೆದ ಮತದಾರರಿಗೆ ಅಭಿನಂದನಾ ಸಮಾವೇಶದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡುತ್ತಿದ್ದರು.

ನಾಲ್ಕೂವರೆ ಕೋಟಿ ಜನರು ಗ್ಯಾರೆಂಟಿ ಲಾಭ ಪಡೆಯುತ್ತಿದ್ದಾರೆ. 7 ಕೆಜಿಯಿಂದ 5 ಕೆಜಿ ಅಕ್ಕಿಗೆ ಇಳಿಸಿದ್ದು ಯಾರಪ್ಪ ಬೊಮ್ಮಾಯಿ? ನಿಮಗೆ ನಾಚಿಕೆಯಾಗಲ್ವಾ? ಇದೇ ಕೇಂದ್ರ ಸರ್ಕಾರ ಅಕ್ಕಿ ಇಟ್ಟುಕೊಂಡು ಅಕ್ಕಿ ಕೊಡಲಿಲ್ಲ. ಯಾವುದೇ ರಾಜ್ಯದಲ್ಲಿ ಬಿಜೆಪಿಯವರು 10 ಕೆ.ಜಿ. ಅಕ್ಕಿ ಕೊಟ್ಟಿರುವ ಉದಾಹರಣೆ ಇದೆಯಾ ಹೇಳಿ? ನಾನು ಇಂದೇ ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಹಾಕಿದರು.

ನಮಗೆ ತೆರಿಗೆ ಪಾಲು ಸರಿಯಾಗಿ ಕೊಡುತ್ತಿಲ್ಲ. ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ ನಮಗೆ ಬರುತ್ತಿರುವುದು 60 ಸಾವಿರ ಕೋಟಿ ಮಾತ್ರ. ನರೇಂದ್ರ ಮೋದೀಜಿ ಇದು ನ್ಯಾಯಾನಾ? ಬಸವರಾಜ ಬೊಮ್ಮಾಯಿ ಯಾವತ್ತಾದರೂ ಇದನ್ನ ಕೇಳಿದ್ದೀಯಾ ಅಂತ ಪ್ರಶ್ನಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ