ಇವರು ನಿಜವಾಗ್ಲೂ ಮನುಷ್ಯರಾ?: ಕುರಿ, ಕೋಳಿನಾ ಮಾರಾಟ ಮಾಡಿದಂತೆ ಕಂದಮ್ಮಗಳ ಮಾರಾಟ - Mahanayaka
6:20 AM Monday 15 - September 2025

ಇವರು ನಿಜವಾಗ್ಲೂ ಮನುಷ್ಯರಾ?: ಕುರಿ, ಕೋಳಿನಾ ಮಾರಾಟ ಮಾಡಿದಂತೆ ಕಂದಮ್ಮಗಳ ಮಾರಾಟ

central crime branch
29/11/2023

ಬೆಂಗಳೂರು: ಬೆಂಗಳೂರಿನ ಸಿಸಿಬಿ ಪೊಲೀಸರು ಹಸುಗೂಸುಗಳ ಮಾರಾಟ ಜಾಲವನ್ನು ಪತ್ತೆ ಮಾಡಿದ್ದು, ಸದ್ಯಕ್ಕೆ ಆರೋಪಿಗಳೆಲ್ಲಾ ತಮಿಳುನಾಡು, ಆಂಧ್ರಪ್ರದೇಶದ ಆರೋಪಿಗಳನ್ನು ಬಂಧಿಸಿದ್ದಾರೆ.


Provided by

ಕರ್ನಾಟದಲ್ಲಿ ಮಹಾಲಕ್ಷ್ಮೀ ಅನ್ನೋ ಮಹಿಳೆ ಇಲ್ಲಿ ಹಸುಗೂಸುಗಳನ್ನು ಖರೀದಿ ಮಾಡಿ ಬೇರೆ ರಾಜ್ಯದವರಿಗೆ ಎಂಟರಿಂದ ಹತ್ತು ಲಕ್ಷದ ವರೆಗೆ ಹಣಕ್ಕೆ ಮಾರಾಟ ಮಾಡಿದ್ದಾಳೆ. ಇದರಲ್ಲಿ ಬಹುತೇಕರು ಅರ್ಥಿಕವಾಗಿ ಕಷ್ಟದಲ್ಲಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದಾರೆ.

ಇನ್ನೂ ಕೆಲವರು ಮಕ್ಕಳು ಬೇಡ ಎಂದು ಅಬಾರ್ಷನ್ ಗೆ ಬಂದವರನ್ನು ಮನವೊಲಿಸಿ ಕಂದಮ್ಮಗಳನ್ನು ತೆಗೆದುಕೊಂಡು ಲಕ್ಷ ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಎಂಟು ಜನರ ಬಂಧನವಾಗಿದ್ದು, ಅವರ ಬ್ಯಾಂಕ್ ಡಿಟೇಲ್ಸ್ ಪರಿಶೀಲನೆ ಮಾಡಿದ ವೇಳೆ ಇವರೆಲ್ಲಾ ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರ ಮಾಡಿರೋದು ಬೆಳಕಿಗೆ ಬಂದಿದೆ.

ಹಸೂಗೂಸುಗಳ ಮಾರಾಟ ಜಾಲದಲ್ಲಿ ಯುವತಿಯರ ಅಂಡಾಣು ಖರೀದಿ ಕೂಡ ಮಾಡಲಾಗಿದೆ. ಈ ಪ್ರಕ್ರಿಯೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಅವಶ್ಯತೆ ಇದ್ದು ಆ ವೈದ್ಯರು ಮತ್ತು ಆಸ್ಪತ್ರೆಗಳು ಯಾವುವು ಅನ್ನೋದು ತನಿಖೆ ನಡೆಸಬೇಕಿದೆ. ಜೊತೆಗೆ ಹಸುಗೂಸುಗಳನ್ನು ತೆಗೆದುಕೊಂಡವರಿಗೆ ನಿಜಕ್ಕೂ ಮಕ್ಕಳು ಇಲ್ದೇ ಖರೀದಿ ಮಾಡಿದ್ದಾರಾ..? ಅಥವಾ ಮಾಟ ಮಂತ್ರಕ್ಕಾಗಿ, ಭಿಕ್ಷಾಟನೆಗಾಗಿ ಬಳಸಿದ್ಧರಾ ಎನ್ನ ಅನುಮಾನ ಅಧಿಕಾರಿಗಳಿಗೆ ಮೂಡಿದೆ. ನಗರದ ಸಿಗ್ನಲ್ ಗಳಲ್ಲಿ ಎಳೆ ಮಕ್ಕಳನ್ನು ಇಟ್ಕೊಂಡು ಭಿಕ್ಷೆ ಬೇಡುವ ಮಹಿಳೆಯರು ಕೂಡ ಇಂತಹ ಕಂದಮ್ಮಗಳನ್ನು ಬಳಸಿರುವ ಶಂಕೆ ಇದೆ.

ಇತ್ತೀಚಿನ ಸುದ್ದಿ