ಪುಂಡಾನೆಯನ್ನು ಸೆರೆ ಹಿಡಿದ ಅರ್ಜುನ ಆ್ಯಂಡ್ ಟೀಮ್

19/08/2023
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ಉಪಟಳ ಕೊಡುತ್ತಿದ್ದ ಪುಂಡಾನೆಯನ್ನು ಅರ್ಜುನ ಆ್ಯಂಡ್ ಟೀಂ ಸೆರೆ ಹಿಡಿದಿದ್ದು ರೈತರು, ಜನರು ಸದ್ಯ ನಿರಾಳರಾಗಿದ್ದಾರೆ.
ಹನೂರು ತಾಲೂಕಿನ ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪೊನ್ನಾಚಿ ಗ್ರಾಮದ ಸುತ್ತಮುತ್ತಲಯ ಉಪಟಳ ನೀಡುತ್ತಿದ್ದ ಈ ಪುಂಡಾನೆಯನ್ನು ಗೆರಟ್ಟಿಕತ್ರಿ ಎಂಬ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.
ಅರ್ಜುನ ಆನೆ ನಾಯಕತ್ವದಲ್ಲಿ ಒಟ್ಡು 6 ಆನೆ 100ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.