ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ! - Mahanayaka
12:25 AM Tuesday 4 - November 2025

ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!

mysore
28/08/2021

ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ವೇಳೆ ಬಂಧಿತ ಆರೋಪಿಗಳ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯುಳ್ಳವರು ಎಂದು ತಿಳಿದು ಬಂದಿದೆ.

ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ಪೈಕಿ ಓರ್ವ,  ತಾನು ಪ್ರೀತಿಸಿದ ಯುವತಿಯನ್ನು ಮದುವೆ ಮಾಡಿಕೊಡಲಿಲ್ಲ ಎಂದು ಯುವತಿಯ ತಂದೆಯನ್ನೇ ಹತ್ಯೆ ಮಾಡಿದ್ದ ಎನ್ನುವ ವಿಚಾರ ಇದೀಗ ಬಯಲಿಗೆ ಬಂದಿದೆ.

ತನ್ನ ಪ್ರೇಯಸಿಯ ತಂದೆಯನ್ನೇ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ ಶಿಕ್ಷೆ ಕೂಡ ಅನುಭವಿಸಿದ್ದ ಎನ್ನಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸಿದ ವೇಳೆ ಈ ವಿಚಾರಗಳು ಬಯಲಾಗಿವೆ. ಇನ್ನೂ ಆರೋಪಿಗಳು ತಮಿಳುನಾಡು ಸಿಮ್ ಬಳಸಿದ್ದರಿಂದಾಗಿ ಪೊಲೀಸರಿಗೆ ಆರೋಪಿಗಳ ಪತ್ತೆಗೆ ಸುಳಿವು ಲಭ್ಯವಾಗಿತ್ತು.

ಈ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು. ಆದರೆ, ಕರ್ನಾಟಕ ಪೊಲೀಸರ ತ್ವರಿಯ ಗತಿ ತನಿಖೆಯಿಂದ ಆರೋಪಿಗಳನ್ನು ಹೆಡೆಮುರಿಕಟ್ಟಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಪೊಲೀಸರು ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಇನ್ನಷ್ಟು ಸುದ್ದಿಗಳು…

ಬಿಜೆಪಿಯ ಕೋಟ್ಯಾಧಿಪತಿ ಸ್ನೇಹಿತರ ಲಾಭಕ್ಕಾಗಿ ವಿವಾದಿತ ಕೃಷಿ ಕಾನೂನು ಜಾರಿ: ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪ

1,500 ವರ್ಷಗಳ ಹಳೆಯ, ಜೊತೆಯಾಗಿ ಸಮಾಧಿ ಮಾಡಲಾದ ಪ್ರೇಮಿಗಳ ಅಸ್ಥಿಪಂಜರಗಳು ಪತ್ತೆ !

ಕಲಬುರ್ಗಿ ಜಿಲ್ಲೆಯ ಜನರು ಸೋಂಬೇರಿಗಳು ಎಂಬ ತನ್ನ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಸಚಿವ ಮುರುಗೇಶ್ ನಿರಾಣಿ

ವಿಮಾನದೊಳಗೆ ಸಿಗರೇಟ್ ಸೇದಿದ ಮಹಿಳೆ: ಸಹ ಪ್ರಯಾಣಿಕರು ವಿರೋಧಿಸಿದರೂ ಕ್ಯಾರೇ ಅನ್ನಲಿಲ್ಲ

ಮದುವೆಯಾದ ಮೂರೇ ದಿನದಲ್ಲಿ ಮದುಮಗಳು ಸಾವು: ಸಂಭ್ರಮದ ಮನೆಯಲ್ಲಿ ಮಡುಗಟ್ಟಿದ ಶೋಕ

ಮೈಸೂರು: ಅತ್ಯಾಚಾರ ಪ್ರಕರಣ | ತಮಿಳುನಾಡಿನಲ್ಲಿ ಐವರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ