ಮಳೆಗೆ ಕೃತಕ ನೆರೆ..! ಹೂಳೆತ್ತದೆ ಸಮಸ್ಯೆ ಉದ್ಭವ..!

ಉಡುಪಿ: ಶಿರಿಬೀಡು ವಾರ್ಡಿನಲ್ಲಿ ಮಂಗಳವಾರ ಸುರಿದ ಮಳೆಯಿಂದ ಕೃತಕ ನೆರೆ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ಥವಾಯಿತು. ತೋಡಿನಲ್ಲಿ ಹೂಳು ಎತ್ತದಿರುವುದು, ಇಲ್ಲಿ ಕಿರು ಸೇತುವೆ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ಬೇಜವಾಬ್ದಾರಿಯಿಂದ ಎಲ್ಲಾ ಆವಾಂತರಗಳಿಗೇ ಕಾರಣ ಎಂದು ಸಮಾಜಸೇವಕ ನಿತ್ಯಾನಂದ ಒಳಕಾಡು ದೂರಿದ್ದಾರೆ.
ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಜುರುಗಿಸುವಂತೆ ಒಳಕಾಡು ಅವರು ಆಗ್ರಹಿಸಿದ್ದಾರೆ.
ಬನ್ನಂಜೆ ಶಿರಿಬೀಡು ವಾರ್ಡಿನಲ್ಲಿ ಕೆಲವು ತಿಂಗಳುಗಳ ಹಿಂದೆ, ಮಳೆ ನೀರು ಹರಿದು ಹೋಗುವ ತೋಡಿಗೆ ರಸ್ತೆ ಹಾದು ಹೋಗುವಲ್ಲಿ ಕಿರುಸೇತುವೆ ಕಟ್ಟಲಾಗಿದೆ. ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಸೇತುವೆಯ ತಳಭಾಗದಲ್ಲಿ ಅಳವಡಿಸಿರುವ ಸೆಂಟ್ರಿಂಗ್ ಕಂಬಗಳನ್ನು ಕಳಚದೆ ಹಾಗೆಯೇ ಇಟ್ಟಿರುವ, ಪರಿಣಾಮದಿಂದ ಮಳೆ ನೀರಿನಲ್ಲಿ ಹರಿದು ಬಂದ ತ್ಯಾಜ್ಯ ರಾಶಿಗಳು, ಕಂಬಗಳಿಗೆ ಸಿಲುಕಿ, ನೀರು ಹರಿಯುವಿಕೆಗೆ ತಡೆಯೊಡ್ಡಿತು.
ಸುತ್ತ ಮುತ್ತಲ ಪ್ರದೇಶಗಳು ಜಲಾವೃತಗೊಂಡವು. ಅದಲ್ಲದೆ ತೋಡಿನಲ್ಲಿ ಡ್ರೈನೆಜ್ ಮೆನ್ ಹೊಲ್ ಇರುವುದು ನೀರಿನ ಹರಿಯುವಿಕೆಗೆ ತಡೆಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw