ಆರ್ಯನ್ ಖಾನ್ ಪ್ರಕರಣದ ವಿವಾದಿತ ಅಧಿಕಾರಿ ಸಮೀರ್ ವಾಂಖೆಡೆ ವರ್ಗಾವಣೆಯಾಗಿದ್ದೆಲ್ಲಿಗೆ? - Mahanayaka

ಆರ್ಯನ್ ಖಾನ್ ಪ್ರಕರಣದ ವಿವಾದಿತ ಅಧಿಕಾರಿ ಸಮೀರ್ ವಾಂಖೆಡೆ ವರ್ಗಾವಣೆಯಾಗಿದ್ದೆಲ್ಲಿಗೆ?

sameer wankhede
31/05/2022


Provided by

ಮುಂಬೈ: ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಆರ್ಯನ್  ಖಾನ್ ಡ್ರಗ್ಸ್ ಪ್ರಕರಣದಲ್ಲಿ ಹಿನ್ನಡೆ ಉಂಟಾಗಿರುವ ಹಿನ್ನೆಲೆಯಲ್ಲಿ ಇವರನ್ನು ಸ್ಥಳಾಂತರಿಸಲಾಗಿದೆ. ಕೇಂದ್ರ ಸರ್ಕಾರ ವಾಂಖೆಡೆ ವಿರುದ್ಧ ಶಿಸ್ತು ಕ್ರಮಕ್ಕೆ ಕೂಡ ಶಿಫಾರಸು ನೀಡಲಾಗಿದ್ದು,ಇದೀಗ ಚೆನ್ನೈಗೆ ವರ್ಗಾವಣೆ ಮಾಡಲಾಗಿದೆ.

ಆರ್ಯನ್ ಖಾನ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅತ್ಯಂತ ವಿವಾದಾತ್ಮಕ ಅಧಿಕಾರಿಗಳಲ್ಲಿ ಒಬ್ಬರು.  ಆರ್ಯನ್  ಖಾನ್ ಅವರನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ವೈದ್ಯಕೀಯ ಪರೀಕ್ಷೆಯನ್ನು ನಡೆಸದಿರುವುದು ಮತ್ತು ವೀಡಿಯೊವನ್ನು ಚಿತ್ರೀಕರಿಸದೆ ದಾಳಿ ಮಾಡಿದ್ದು ಕೂಡ ವಾಂಖೆಡೆ ವಿರುದ್ಧ ಕೇಳಿಬಂದ ಆರೋಪಗಳಾಗಿದ್ದವು.

ಆಗಿನ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಶಾರುಖ್ ಖಾನ್ ಅವರಿಂದ ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಬಹಿರಂಗಪಡಿಸಿದ್ದರು.  ವಿವಾದದ  ನಂತರ, ಎನ್ಸಿಬಿಯ ವಿಶೇಷ ತಂಡವು ತನಿಖೆಯನ್ನು ವಹಿಸಿಕೊಂಡಿದೆ.

ಆರ್ಯನ್ ಖಾನ್ ಸೇರಿದಂತೆ ಆರು ಜನರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನ್ಯಾಯಾಲಯಕ್ಕೆ ಸಲ್ಲಿಸಿರುವ 6,000 ಪುಟಗಳ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.  14 ಆರೋಪಿಗಳ ಪ್ರಕರಣದಲ್ಲಿ ಆರ್ಯನ್ ಸೇರಿದಂತೆ 6 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪತಿ ಜೊತೆ ಜಗಳ: ತನ್ನ ಆರು ಮಕ್ಕಳನ್ನು ಬಾವಿಗೆಸೆದ ಪಾಪಿ ತಾಯಿ!

ಮಳಲಿ ಮಸೀದಿ ವಿವಾದಕ್ಕೆ ಎಸ್ ಡಿಪಿಐ ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಎಂಟ್ರಿ!

ಮಳಲಿ ಮಸೀದಿ ವಿವಾದಕ್ಕೆ ಎಸ್ ಡಿಪಿಐ ಬಳಿಕ ಕಲ್ಲಡ್ಕ ಪ್ರಭಾಕರ್ ಭಟ್ ಎಂಟ್ರಿ!

ಮುಸ್ಲಿಮ್ ಮಹಿಳೆಯರ ಧಾರ್ಮಿಕ ವಸ್ತ್ರ ಬುರ್ಖಾ ಧರಿಸಿ ಅಸಭ್ಯ ನೃತ್ಯ!

ಇತ್ತೀಚಿನ ಸುದ್ದಿ