ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಬಿಜೆಪಿ ನಾಯಕರ ನಡುವೆ ಕಿತ್ತಾಟ! - Mahanayaka
12:16 PM Thursday 18 - September 2025

ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗುತ್ತಿದ್ದಂತೆಯೇ ಬಿಜೆಪಿ ನಾಯಕರ ನಡುವೆ ಕಿತ್ತಾಟ!

vidhanasabha
20/03/2025

ಬೆಂಗಳೂರು: ರಾಜ್ಯ ವಿಧಾನ ಸಭೆಯಲ್ಲಿ  ಹನಿಟ್ರ್ಯಾಪ್ ಪ್ರಕರಣ ಸರ್ಕಾರವನ್ನು  ಇಕ್ಕಟ್ಟಿಗೆ ಸಿಲುಕಿಸಿದ್ದು, ಈ ಪ್ರಕರಣದ ತನಿಖೆಗೆ ಯಾವ ರೀತಿಯಲ್ಲಿ ತನಿಖೆಗೆ ಆದೇಶ ನೀಡುವುದು ಎನ್ನುವ ಗೊಂದಲದಲ್ಲಿದೆ. ಈ ನಡುವೆ ಹನಿಟ್ರ್ಯಾಪ್ ವಿಚಾರವನ್ನು ಸಚಿವ ಕೆ.ಎನ್.ರಾಜಣ್ಣ ಪ್ರಸ್ತಾಪಿಸುತ್ತಿದ್ದಂತೆಯೇ ಅತ್ತ ಬಿಜೆಪಿ ನಾಯಕರ ನಡುವೆ ಕಿತ್ತಾಟ ನಡೆದಿದೆ.


Provided by

ಹನಿಟ್ರ್ಯಾಪ್ ಪ್ರಕರಣವನ್ನು ತನಿಖೆ ನಡೆಸಬೇಕು ಅಂತ  ಯತ್ನಾಳ್, ಮುನಿರತ್ನ ಹಾಗೂ ಸುನೀಲ್ ಕುಮಾರ್ ಒತ್ತಾಯ ಮಾಡಿದರು. ಆದರೆ ಮುಂದೆ ನಿಂತು ಮಾತನಾಡಬೇಕಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಸೈಲೆಂಟ್ ಆಗಿ ಕುಳಿತಿರುವುದನ್ನು ಕಂಡ ಸುನೀಲ್ ಕುಮಾರ್ ಆರ್.ಅಶೋಕ್ ವಿರುದ್ಧ ಗರಂ ಆಗಿದ್ದಾರೆ.

ಅಲ್ರಿ ಅಶೋಕ್ ನಿಮಗೆ ನ್ಯಾಯಾಂಗ ತನಿಖೆಗೆ ಕೊಡಿ ಅಂತ ಕೇಳೋಕೆ ಆಗಲ್ವಾ? ನಾನು ಎದ್ದು ನಿಂತು ಮಾತನಾಡ್ತಾ ಇದ್ದೀನಿ, ನೀವು ಬಾಯಿ ಬಿಟ್ಟು ತನಿಖೆಗೆ ಕೇಳೋಕೆ ಆಗಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಎಚ್ಚೆತ್ತುಕೊಂಡ ಅಶೋಕ್,  ಏಯ್ ನಾನೇ ಮೊದಲಿಗೆ ತನಿಖೆಗೆ ಮಾತನಾಡಿದ್ದು ಎಂದರು. ಈ ವೇಳೆ ಸುನೀಲ್ ಕುಮಾರ್, ಎಲ್ರಿ ಮಾತನಾಡ್ರಿ, ನಾನು ಪ್ರಸ್ತಾಪ ಮಾಡಿದ ನಂತರ ನೀವು ನಿಂತಿದ್ದು… ನಾನು ನ್ಯಾಯಾಂಗ ತನಿಖೆಗೆ ಕೊಡಿ ಅಂತ ಕೇಳ್ಬೇಕ? ನೀವು ಎದ್ದು ನಿಂತು ಹೇಳಬೇಕಿತ್ತಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅಶೋಕ್ ಇಲ್ಲ ನಾನೇ ಕೇಳಿದ್ದು ಎಂದು ವಾದಿಸಿದರು, ಪ್ರತಿಯಾಗಿ ಸುನೀಲ್ ಕುಮಾರ್ ನಾನೇ ನಿಮಗೆ ಹೇಳಿಕೊಟ್ಟಿದ್ದು, ಆಮೇಲೆ ನೀವು ಹೇಳಿದ್ದು ಎಂದು ಪ್ರತ್ಯುತ್ತರ ನೀಡಿದರು.

ಆರ್.ಅಶೋಕ್ ಆಡಳಿತ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ತಾರೆ ಅನ್ನೋ ವಿರೋಧಿ  ಬಣದ ಆರೋಪಗಳ ನಡುವೆಯೇ ಬಿಜೆಪಿ ನಾಯಕರಿಬ್ಬರ ಕಿತ್ತಾಟ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ