ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಬೇಟೆ: ಚಿನ್ನ ಗೆದ್ದ ಕ್ರೀಡಾಪಟು ತಜಿಂದರ್ ಪಾಲ್, ಅವಿನಾಶ್ - Mahanayaka

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಬೇಟೆ: ಚಿನ್ನ ಗೆದ್ದ ಕ್ರೀಡಾಪಟು ತಜಿಂದರ್ ಪಾಲ್, ಅವಿನಾಶ್

01/10/2023

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಶಾಟ್ ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದಿದ್ದಾರೆ.

ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಪಾಲ್ ಮಾಡಿದ ಹೊರತಾಗಿಯೂ ಭಾನುವಾರ ನಡೆದ ಪುರುಷರ ಶಾಟ್ ಪುಟ್ ಫೈನಲ್ ನಲ್ಲಿ ತಜಿಂದರ್ ಪಾಲ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರು. 20.36 ಮೀಟರ್ ದೂರ ಎಸೆಯುವ ಮೂಲಕ ತಜೇಂದರ್ ಪಾಲ್ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಬ್ಯಾಕ್-ಟು-ಬ್ಯಾಕ್ ಚಿನ್ನದ ಪದಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದಾರೆ.

ಮತ್ತೊಂದೆಡೆ ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಭಾರತದ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದರು. ಅವಿನಾಶ್ 8.19 54 ಸೆಕೆಂಡ್ ನಲ್ಲಿ ನಿಗದಿತ ಗುರಿ ತಲುಪುವ ಮೂಲಕ ಭಾರತಕ್ಕೆ 12ನೇ ಚಿನ್ನದ ಪದಕ ತಂದುಕೊಟ್ಟರು.


Provided by

ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಭಾರತಕ್ಕೆ ಇದು ಮೊದಲ ಚಿನ್ನದ ಪದಕವಾಗಿದೆ. ಈ ಮೂಲಕ ಭಾರತ 13 ಚಿನ್ನದ ಪದಕ ಪಡೆದುಕೊಂಡಿದೆ. ಭಾರತ ಪದಕಗಳ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಇತ್ತೀಚಿನ ಸುದ್ದಿ